ಚಾಮರಾಜನಗರ –
ಚಾಲಕನ ನಿಯಂತ್ರಣ ತಪ್ಪಿದ ಟೆಂಪೂ ಟ್ರಾವೆಲರ್ ವಾಹನಗೊಂದು ಪಲ್ಟಿಯಾಗಿ ಮೂವರು ಸಾವಿಗೀಡಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ತಮಿಳುನಾಡಿನ ತಿರುಪೂರ್ ನಿಂದ ಮೈಸೂರಿಗೆ ಬರುತ್ತಿದ್ದ ವಾಹನವೊಂದು ರಸ್ತೆ ಅಪಘಾತಕ್ಕೀಡಾಗಿದೆ.ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

14 ಮಂದಿ ಗಾಯಗೊಂಡಿದ್ದಾರೆ. ಚಾಮರಾಜನಗರದ ಸುವರ್ಣಾವತಿ ಜಲಾಶಯ ಸಮೀಪದ ಗುಡಿಬೋರೆ ಬಳಿ ಈ ಒಂದು ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಈ ಬೆಳಿಗ್ಗೆ 4 30 ಕ್ಕೆ ಈ ಒಂದು ಘಟನೆ ನಡೆದಿದೆ.

ಇನ್ನೂ ಗಾಯಾಳುಗಳನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು ಇವರಲ್ಲಿ ಕೆಲವರು ಜೀವನ್ಮರಣದಲ್ಲಿ ಹೊರಾಟ ಮಾಡುತ್ತಿದ್ದಾರೆ.ರಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲು ಮಾಡಕೊಂಡಿರುವ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.