ಮಂಗಳೂರು –
ಮಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾದ ನಂತರ ಬಿಚ್‌ನಲ್ಲಿ ಪುಂಡ ಪೋಕರಿಗಳ ಹಾವಳಿಗೆ ಬ್ರೇಕ್ ಹಾಕಿ, ಗಾಂಜಾ ಆರೋಪಿಗಳ ಹೆಡೆಮೂರಿ ಕಟ್ಟಿ ಸೈ ಎನಿಸಿಕೊಂಡ ಮೇಲೆ ಇದೀಗ, ಕಾರ್ಯಕ್ರಮವೊಂದರಲ್ಲಿ ದಾಸ ಗೀತೆ ಹಾಡಿ ಮೆಚ್ಚುಗೆ ಪಡೆದಿದ್ದಾರೆ IPS ಅಧಿಕಾರಿ ಶಶಿಕುಮಾರ್.

ಪಾಂಡೇಶ್ವರ ಶ್ರೀಮಹಾಲಿಂಗೇಶ್ವರ ದೇವಲಾಯದ ಬ್ರಹ್ಮಕಲಶೋತ್ಸವದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ‘ತಾನಲ್ಲ.. ತನ್ನದಲ್ಲ..’ ಎಂಬ ಹಾಡನ್ನ ಹಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ .

ಅಲ್ಲದೇ ‘ಏಸು ಕಾಯಂಗಾಳ ಕಳೆದು’ ಎಂಬ ದಾಸ ಗೀತೆಗೆ ಎನ್ ಶಶಿಕುಮಾರ್ ಧ್ವನಿ ಕೊಟ್ಟಿದ್ದಾರೆ.. ಆ್ಯಕ್ಷನ್‌ಗೂ ಸೈ.
ಸಿಂಗಿಂಗ್‌ಗೂ ಜೈ ಎಂಬಂತೆ ಎನ್ ಶಶಿಕುಮಾರ್ ಭಾರಿ ಜನಮೆಚ್ಚುಗೆ ಪಡೆಯುತ್ತಿದ್ದಾರೆ.