ಮೈಸೂರು –
ಎತ್ತಿನಗಾಡಿ ಓಟದ ವೇಳೆ ಅವಘಡವೊಂದು ನಡೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ದೀಪಾವಳಿ ಹಬ್ಬದ ಅಂಗವಾಗಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನುವ ಹಮ್ಮಿಕೊಳ್ಳಲಾಗಿತ್ತು.ಜೋರಾಗಿ ಓಡುವ ರಬಸದಲ್ಲಿ ಎತ್ತಿನಗಾಡಿಗಳು ಮನೆಗೆ ನುಗ್ಗಿವೆ.
ಜೋರಾಗಿ ಚಕ್ಕಡಿಯೊಂದಿಗೆ ಬಂದ ಎರಡು ಎತ್ತುಗಳು ಮನೆಯ ಗೋಡೆಗೆ ನುಗ್ಗಿ ಡಿಕ್ಕಿ ಹೊಡೆದಿವೆ. ಎತ್ತಿನಗಾಡಿ ಡಿಕ್ಕಿಯಿಂದ ಮನೆ ಜಖಂ ಆಗಿದೆ.ಮೈಸೂರಿನಲ್ಲಿ ದೀಪಾವಳಿ ಹಬ್ಬದ ದಿನ ಅವಘಡ ನಡೆದಿದ್ದು ಹೆಚ್ ಡಿ ಕೋಟೆ ತಾಲ್ಲೂಕಿನ ಕೆ.ಬೆಳತ್ತೂರು ಗ್ರಾಮದಲ್ಲಿ ಘಟನೆ ನಡೆದಿದೆ.
ದೀಪಾವಳಿಯ ಪ್ರಯುಕ್ತ ಎತ್ತಿನಗಾಡಿ ಓಟ ಆಯೋಜನೆ ಮಾಡಲಾಗಿತ್ತು. ಆಯತಪ್ಪಿ ಮನೆಗೆ ಡಿಕ್ಕಿಯಾಗಿದೆ ಎತ್ತಿನಗಾಡಿ ಘಟನೆಯಲ್ಲಿ ಯಾವುದೇ ರೀತಿಯ ಅವಘಡ ನಡೆದಿಲ್ಲ. ಸಮಯ ಸರಳವಾಗಿದ್ದು ಇನ್ನೂ ಚಕ್ಕಡಿಯಲ್ಲಿದ್ದವರು ಎತ್ತುಗಳು ಕೂಡಾ ಪಾರಾಗಿದ್ದು ಯಾವುದೇ ರೀತಿಯ ಅವಘಡ ನಡೆದಿಲ್ಲ.