ಚಿತ್ರದುರ್ಗ –
ಅಂತರ್ಜಾತಿ ವಿವಾಹದ ಪ್ರೋತ್ಸಾಹ ಧನ ಮಂಜೂರು ಮಾಡಲು ಹಣ ಡಿಮ್ಯಾಂಡ್ ಮಾಡಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಪ್ರೋತ್ಸಾಹ ಧನ ಬಿಡುಗಡೆಗೆ 15 ಸಾವಿರಕ್ಕೆ ಬೇಡಿಕೆ ಇಟ್ಟು 10 ಸಾವಿರ ಲಂಚವನ್ನು ಪಡೆಯುತ್ತಿದ್ದರು ಅಧಿಕಾರಿ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಎಡಿ ಮಂಜುನಾಥ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.ಲಂಚವನ್ನು ಪಡೆಯುವಾಗ ಸಮಾಜ ಕಲ್ಯಾಣ ಇಲಾಖೆ ಎಡಿ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಕೊಂಡಿದ್ದಾರೆ.
15 ಸಾವಿರಕ್ಕೆ ಭೇಡಿಕೆ ಇಟ್ಟು 10 ಸಾವಿರವನ್ನು ತಗೆದುಕೊಳ್ಳುತ್ತಿದ್ದರು. ಶಿವಣ್ಣ ಎಂಬುವವರಿಂದ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದರು ಮಂಜುನಾಥ್. ಹೊಸದುರ್ಗ ಪಟ್ಟಣದ ಕಚೇರಿಯಲ್ಲಿ ಟ್ರ್ಯಾಪ್ ಮಾಡಲಾಗಿದೆ. ಎಸಿಬಿ DYSP ಬಸವರಾಜ್ ಆರ್. ಮಗದುಮ್ ನೇತೃತ್ವದಲ್ಲಿ ದಾಳಿಯಾಗಿದೆ.