ಜೈಲಾಧಿಕಾರಿ ಸೇರಿದಂತೆ ಎಂಟು ಜನರನ್ನು ಹತ್ಯೆ ಮಾಡಿ ನೂರಕ್ಕೂ ಹೆಚ್ಚು ಕೈದಿಗಳು ಪರಾರಿ…..

Suddi Sante Desk

ಹೈಟಿ –

ಜೈಲಾಧಿಕಾರಿ ಸೇರಿದಂತೆ ಎಂಟು ಜನರನ್ನು ಹತ್ಯೆ ಮಾಡಿ ನೂರಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿ ರುವ ಘಟನೆ ಹೈಟಿ ಪ್ರದೇಶದಲ್ಲಿ ನಡೆದಿದೆ. ಕ್ರೋಯಿಕ್ಸ್ ಡೇಸ್ ಬಾಕಿಟ್ಸ್ ಪ್ರದೇಶದಲ್ಲಿ ಜೈಲಾಧಿಕಾರಿಯನ್ನು ಕೊಂದು 100ಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದಾರೆ.

ಶಸ್ತ್ರಾಸ್ತ್ರ ಹೊಂದಿದ್ದ ಗುಂಪೊಂದು ಜೈಲಿನಲ್ಲಿ ಗುಂಡಿನ ದಾಳಿ ನಡೆಸಿದೆ. ಈ ವೇಳೆ ಜೈಲು ಅಧಿಕಾರಿಯನ್ನು ಹತ್ಯೆ ಮಾಡಿದ್ದು ಜೈಲಿನಲ್ಲಿದ್ದ ನೂರಾರು ಕೈದಿಗಳು ಕಂಬಿಗಳನ್ನು ಮುರಿದು ಪರಾರಿಯಾಗಿದ್ದಾರೆ.

ಒಟ್ಟಾರೆ ಜೈಲಾಧಿಕಾರಿ ಸೇರಿ ಎಂಟು ಮಂದಿ ಮೃತಪಟ್ಟಿದ್ದಾರೆ. ಇನ್ನುಳಿದಂತೆ ಹಲವರು ಪರಾರಿ ಯಾಗಿದ್ದು ಆ ಪೈಕಿ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.

2012 ರಲ್ಲಿ ಈ ಬಂಧಿಖಾನೆಯನ್ನು ನಿರ್ಮಾಣ ಮಾಡಲಾಗಿತ್ತು. ಇದಾದ ಎರಡೇ ವರ್ಷದಲ್ಲಿ ಅಂದರೆ 2014ರಲ್ಲಿ ಜೈಲಿನಿಂದ 300 ಮಂದಿ ಕೈದಿಗಳು ಪರಾರಿಯಾಗಿದ್ದರು ಈಗ ಇದೇ ಕಾರಾಗೃಹದಲ್ಲಿ ಮತ್ತೊಂದು ಘಟನೆ ನಡೆದಿದ್ದು ಸಧ್ಯ ಎಂಟು ಜನರನ್ನು ಹತ್ಯೆ ಮಾಡಿ ಸಾಕಷ್ಟು ಪ್ರಮಾಣದಲ್ಲಿ ಕೈದಿಗಳು ಎಸ್ಕೇಪ್ ಆಗಿದ್ದಾರೆ‌.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.