ಬೆಂಗಳೂರು –
ರಾಜ್ಯದಲ್ಲಿ ಮರಾಠಾ ಪ್ರಾಧಿಕಾರ ರಚನೆ ಬೆನ್ನಲ್ಲೇ ತ್ರೀವ್ರ ಟೀಕೆಗೆಗೊಳಗಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಕೊನೆಗೂ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮಕ್ಕೆ ಒಪ್ಪಿದ್ದಾರೆ.ಸ್ವಪಕ್ಷೀಯರು ಹಾಗೂ ಸಮುದಾಯ ಮುಖಂಡರ ಒತ್ತಾಯಕ್ಕೆ ಮಣಿದ ಸಿಎಂ ಬಿ.ಎಸ್.ಯಡಿಯೂರಪ್ಪ ಇತ್ತೀಚಿಗಷ್ಟೇ ಮರಾಠಿ ಪ್ರಾಧಿಕಾರ ರಚನೆಗೆ ಆದೇಶವನ್ನು ಹೊರಡಿಸಿದ್ದರು. ಇದರ ವಿರುದ್ದ ಸಾಕಷ್ಟು ಪ್ರಮಾಣದಲ್ಲಿ ಟೀಕೆಗಳೊಂದಿಗೆ ಡಿಸೆಂಬರ್ 5 ರಂದು ರಾಜ್ಯ ಬಂದ್ ಗೆ ಸಂಘಟನೆಯೊಂದರ ಮುಖಂಡರು ಕರೆದಿದ್ದರು.ಇವೆಲ್ಲದರ ನಡುವೆ ಮುಖ್ಯಮಂತ್ರಿ ಕೊನೆಗೂ ಮಣಿದು ಐತಿಹಾಸಿಕವಾದ ನಿರ್ಧಾರವನ್ನು ಮುಖ್ಯಮಂತ್ರಿ ಕೈಗೊಂಡು ಆದೇಶವನ್ನು ಹೊರಡಿಸಿದ್ದಾರೆ.

ಸಧ್ಯ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪನೆಗೆ ಆದೇಶ ಹೊರಡಿಸಿದ್ದು, ಈ ಕುರಿತು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಎರಡು ದಶಕಗಳ ಬೇಡಿಕೆ ಈಡೇರಿದಂತಾಗಿದೆ.ಶಿರಾ ಉಪಚುನಾವಣೆ ಸಂದರ್ಭದಲ್ಲಿ ಕಾಡುಗೊಲ್ಲರ ಮತಗಳ ಮೇಲೆ ಕಾಣ್ಣಿಟ್ಟು ಅವರಿಗಾಗಿಯೇ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿತ್ತು. ಬಸವಕಲ್ಯಾಣ ಉಪಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆದೇಶ ಹೊರಡಿಸಲಾಗಿತ್ತು.ಇದರೊಂದಿಗೆ ವೀರಶೈವ ಲಿಂಗಾಯತ ಸಮುದಾಯದ ಬಹು ದಿನಗಳ ಬೇಡಿಕೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಈಡೇರಿಸಿದ್ದಾರೆ.

ಇದರಿಂದ ವೀರಶೈವ ಲಿಂಗಾಯತ ಸಮುದಾಯದವರು ಸಂತಸಗೊಂಡಿದ್ದಾರೆ.ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಬೆನ್ನಲ್ಲೇ ರಾಜ್ಯದಲ್ಲಿ ಮುಖ್ಯಮಂತ್ರಿ ವಿರುದ್ದ ಸಾಕಷ್ಟು ಪ್ರಮಾಣದಲ್ಲಿ ಟೀಕೆಗಳು ಆರೋಪಗಳು ಆರಂಭಗೊಂಡಿದ್ದವು ಇದರನ ಬೆನ್ನಲ್ಲೇ ಕೊನೆಗೂ ಇವೆಲ್ಲವುಗಳಿಗೆ ಮಣಿದ ಸಿಎಮ್ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿಯ ಪ್ರಾಧಿಕಾರ ರಚನೆ ಮಾಡಬೇಕೆಂದು ಡಿಸಿಎಂ ಲಕ್ಷ್ಮಣ ಸವದಿ ಸಚಿವರಾದ ವಿ.ಸೋಮಣ್ಣ ಬಿ.ಸಿ.ಪಾಟೀಲ್ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರು ಅವರಿದ್ದ ನಿಯೋಗ ಈ ಹಿಂದೆ ಮುಖ್ಯಮಂತ್ರಿಗೆ ಮನವಿ ಮಾಡಿತ್ತು.