ಅಪರಿಚಿತ ವ್ಯಕ್ತಿಯ ಶವ ಪತ್ತೆ – ವ್ಯಕ್ತಿಯ ಸಾವೀನ ಕುರಿತಂತೆ ಮಾಹಿತಿ ಕಲೆಹಾಕುತ್ತಿರುವ ನವನಗರ ಪೊಲೀಸರು

Suddi Sante Desk

ಹುಬ್ಬಳ್ಳಿ –

ಅಪರಿಚಿತ ವ್ಯಕ್ತಿಯ ಶವವೊಂದು ಹುಬ್ಬಳ್ಳಿಯಲ್ಲಿ ಪತ್ತೆಯಾಗಿದೆ. ಹುಬ್ಬಳ್ಳಿಯ ನವನಗರದ ಈಶ್ವರನಗರದಲ್ಲಿ ಪತ್ತೆಯಾಗಿದೆ. ವೈಷ್ಣವಿ ಪೆಟ್ರೊಲ್ ಬಂಕ್ ಹಿಂದೆ ರಸ್ತೆ ಪಕ್ಕದಲ್ಲಿನ ಸೇತುವೆಯ ಪಕ್ಕದಲ್ಲಿಯೇ ವ್ಯಕ್ತಿಯೊಬ್ಬರ ಶವವೊಂದು ಪತ್ತೆಯಾಗಿದೆ.

ಸಾವಿಗೀಡಾಗಿ ಮೂರು ನಾಲ್ಕು ದಿನಗಳಾಗಿದ್ದು ಸಾರ್ವಜನಿಕರು ನೋಡಿ ನಗರದ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು ಈ ಕುರಿತಂತೆ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ನವನಗರ ಪೊಲೀ ಸರು ಪರಿಶೀಲನೆ ಮಾಡಿ ಪ್ರಕರಣವನ್ನು ದಾಖಲು ಮಾಡಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿ ದ್ದಾರೆ. ಇನ್ನೂ ವ್ಯಕ್ತಿ ಕುಳಿತಂತೆ ಶವವಾಗಿದ್ದು ಮೂರು ನಾಲ್ಕು ದಿನಗಳಾಗಿದ್ದು ಈ ಕುರಿತಂತೆ ಪೊಲೀಸರು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.