ಹೊಸಪೇಟೆ –
ಕೊರೊನ ವ್ಯಾಕ್ಸಿನ್ ಪಡೆದಿದ್ದ ಸರ್ಕಾರಿ ಆಸ್ಪತ್ರೆಯ ನೌಕರನೊಬ್ಬ ಸಾವಿಗೀಡಾದ ಘಟನೆ ಹೊಸಪೇಟೆ ಯಲ್ಲಿ ನಡೆದಿದೆ. ಮದುಮೇಯಿ ಹಾಗೂ ಬಿಪಿ ಕಾಯಿಲೆ ಹೊಂದಿದ್ದ ಸಂಡೂರಿನ ಸರ್ಕಾರಿ ಆಸ್ಪತ್ರೆಯ ಡಿ.ಗ್ರೂಪ್ ನೌಕರ ನಾಗರಾಜ್ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ನಿನ್ನೇಯಷ್ಟೇ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರು.ಇಂದು ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದಾರೆ. ಏಕಾಎಕಿ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಯ ಆವರಣದಲ್ಲಿ ಕುಸಿದು ಬಿದ್ದದ್ದರು.ಕೂಡಲೆ ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಜನವರಿ 16ರಂದು ಕೊರೊನ ಲಸಿಕೆಯನ್ನು ಪಡೆದುಕೊಂಡಿದ್ದರು ನಾಗರಾಜ.ಸಧ್ಯ ಇವರಿಗೆ ತೀವ್ರವಾದ ಎದೆನೋವು ಕಾಣಿಸಿಕೊಂಡು ಸಾವಿಗೀಡಾಗಿದ್ದು ಯಾತಕ್ಕಾಗಿ ಸಾವು ಸಂಭವಿಸಿದೆ ಎಂಬ ಅನುಮಾನ ಕಾಡುತ್ತಿದೆ.