ಧಾರವಾಡದಲ್ಲಿ ಬಿಜೆಪಿ ನಾಯಕ ಕೈ ಮುಗಿದು ವಿನಂತಿ ಮಾಡಿಕೊಂ ಡರು ಕರಗದ ಪೊಲೀಸರ ಮನಸ್ಸು – ಅಸಹಾಯರಾಗಿ ತೆರಳಿದ ದತ್ತಾ ಡೊರ್ಲೆ…..

Suddi Sante Desk

ಧಾರವಾಡ –

ರಾಜ್ಯಾದ್ಯಂತ ಇಂದು ಲಾಕ್ ಡೌನ್ ಜಾರಿಯಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಫೀಲ್ಡ್ ಗಿಳಿದಿದ್ದು ಬೇಕಾಬಿಟ್ಟಿಯಾಗಿ ತಿರುಗಾಡುತ್ತಿರುವ ವಾಹನಗಳಿಗೆ ಬ್ರೇಕ್ ಹಾಕಿದ್ದಾರೆ.ಇನ್ನೂ ಧಾರವಾಡ ದಲ್ಲಿ ಬಿಜೆಪಿ ನಾಯಕ ದತ್ತಾಡೋರ್ಟ್ ಇವತ್ತಿನ ಪರಸ್ಥಿತಿಯನ್ನು ನೋಡಿ ಸಾರ್ವಜನಿಕರಿಗೆ ಯಾವು ದೇ ರೀತಿಯಲ್ಲಿ ತೊಂದರೆಯಾಗಬಾರದೆಂದು ಪೊಲೀಸರ ಬಳಿ ಮನವಿ ಮಾಡಿಕೊಂಡರು

ರಾಜ್ಯ ಸರ್ಕಾರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆ ಯ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅನುಮತಿ ಯನ್ನು ನೀಡಿದೆ‌. ಹೀಗಾಗಿ ತಿರುಗಾಡಲು ಅವಕಾಶ ನೀಡಿ ಇದರಿಂದ ತುಂಬಾ ತೊಂದರೆಯಾಗುತ್ತದೆ ಕೈ ಮುಗಿದು ಹೇಳಿಕೊಳ್ಳುತ್ತೇನೆ ಎಂದರು

ಪೊಲೀಸರ ಬಳಿ ಕೈ ಮುಗಿದು ಹೇಳಿಕೊಂಡರು ಕೇಳಿ ದರು ಕೂಡಾ ಒಪ್ಪಲಿಲ್ಲ. ನಗರದ ಸಪ್ತಾಪೂರ ಬಳಿ ಬೆಳಿಗ್ಗೆ ಸಾರ್ವಜನಿಕರು ಮತ್ತು ವಯಕ್ತಿಕವಾಗಿ ತಾವು ಅನುಭವಿರುತ್ತಿರುವ ನೋವನ್ನು ಹೇಳಿಕೊಂ ಡರು ಕೂಡಾ ಪೊಲೀಸ್ ಅಧಿಕಾರಿಗಳ ಅದಕ್ಕೆ ಒಪ್ಪಲಿಲ್ಲ ರಾಜ್ಯ ಸರ್ಕಾರಕ್ಕೆ ಹೇಳಿ ನಾವು ಏನೋ ಇದ್ದರೂ ಸರ್ಕಾರ ನಿಯಮಗಳನ್ನು ಪಾಲಿಸುವವರು ದಯಾಮಾಡಿ ನಮಗೇನು ಹೇಳಲು ಬರಬೇಡಿ ಎಂದು ಹೇಳಿದರು

ಎಸಿಪಿ ಅನುಷಾ ಮತ್ತು ಉಪನಗರ ಪೊಲೀಸ್ ಇನ್ಸ್ಪೆಕ್ಟರ್ ಕರ್ ಶ್ಯಾಮರಾವ್ ಸಜ್ಜನ ಬಳಿ ಹೇಳಿ ಕೊಂಡ ಚಿತ್ರಣ ಕಂಡು ಬಂದಿತು ರಾಜ್ಯದಲ್ಲಿ ಇನ್ನೂ ಸ್ಥಳೀಯವಾಗಿ ಮತ್ತು ರಾಜ್ಯದಲ್ಲಿ ಅವರದೇ ಪಕ್ಷದ ಶಾಸಕರು ಸರ್ಕಾರ ಇದ್ದರೂ ಕೂಡಾ ಸಾರ್ವಜನಿಕರ ಎದುರು ಅಸಹಾಯಕರಾಗಿ ಮಾತನಾಡಿ ಹೋಗಿದ್ದು ಕಂಡು ಬಂದಿತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.