ಧಾರವಾಡದಲ್ಲಿ ಅಪಹರಣ ವಾಗಿದ್ದ ಹುಡುಗ ಪತ್ತೆ – ಆರು ಜನ ಆರೋಪಿಗಳ ಬಂಧನ…..

Suddi Sante Desk

ಧಾರವಾಡ –

04/04/2021 ರಂದು ಧಾರವಾಡ ಉಪನಗರ ಪೊಲೀಸ ಠಾಣಾ ವ್ಯಾಪ್ತಿಯ ಶ್ರೀನಗರ ಸರ್ಕಲ್ ಹತ್ತಿರ ಫಿರ್ಯಾಧಿಯ ಮಗನು ತನ್ನ ಸ್ನೇಹಿತ ನೊಂದಿಗೆ ಹೊರಟಾಗ ಯಾರೋ ಅರೋಪಿತರು ತಾವು ತಂದಿದ್ದ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದರು‌. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಒಂದು ಪ್ರಕರಣದ ತನಿಖೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಧಾರವಾಡದ ಉಪನಗರ ಪೊಲೀಸರು ಮಾಡಿ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ

ಶ್ರೀಮತಿ.ಅನುಷಾ.ಜಿ. ಎಸಿಪಿ ಧಾರವಾಡ ಉಪ- ವಿಭಾಗ ಇವರ ಮಾರ್ಗದರ್ಶನದಲ್ಲಿ ಧಾರವಾಡ ಉಪನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪ್ರಮೋದ ಯಲಿಗಾರ ಪೊಲೀಸ್ ಇನ್ಸಪೆಕ್ಟರ ಉಪನಗರ ಪೊಲೀಸ್ ಠಾಣೆ ,ಎಮ್.ಕೆ.ಬಸಾಪೂರ ಪೊಲೀಸ್ ಇನ್ಸ್‍ಪೆಕ್ಟರ್ ವಿದ್ಯಾಗಿರಿ ಪೊಲೀಸ್ ಠಾಣೆ ಧಾರವಾಡ ಮತ್ತು ಸಂಗಮೇಶ ದಿಡಗಿನಾಳ ಪೊಲೀಸ್ ಇನ್ಸ್‍ಪೆಕ್ಟರ್ ಶಹರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಜನರೊಳಗೂಂಡ ವಿಶೇಷ ತಂಡಗ ಳನ್ನು ರಚಿಸಿ ಅಪಹರಣಗೂಂಡಿದ್ದ ಹುಡುಗನಿಗೆ ಪತ್ತೆ ಮಾಡಿ ಅಪಹರಣ ಮಾಡಿದ ಆರು ಜನ ಆರೋಪಿಗಳನ್ನು ಬಂಧನ ಮಾಡಲಾಗಿದೆ.

ಉಮೇಶ ಬಾಬು ಭಜಂತ್ರಿ , ವಯಾ: 28 ವರ್ಷ, ಸಾ: ಅಗರಕೇಡ್ ತಾ: ಇಂಡಿ ಜಿ:ವಿಜಯಪುರ

ಗುರು ಬಸನಗೌಡ ಪಾಟೀಲ್ ವಯಾ: 29 ವರ್ಷ ಸಾ: ಮೊರಬ ತಾ:ನವಲಗುಂದ

ಮಂಜುನಾಥ ಕಲ್ಲಪ್ಪ ಸರಕಾರ , ವಯಾ: 28 ವರ್ಷ ಸಾ: ಮೊರಬ ತಾ:ನವಲಗುಂದ

ಸಂತೋಷ ಬಸಪ್ಪ ಬೆಣ್ಣೆ, ವಯಾ:30 ವರ್ಷ ಸಾ: ಮೊರಬ ತಾ:ನವಲಗುಂದ

ಗಂಗಯ್ಯ ತಂದೆ ರುದ್ರಯ್ಯ ಶಾಸ್ರೀಮಠ, ವಯಾ: 33 ವರ್ಷ ಸಾ: ಶಿರಕೋಳ ತಾ: ನವಲಗುಂದ

6) ಮಲ್ಲಯ್ಯ ತಂದೆ ವೀರಯ್ಯ ಶಾಸ್ತ್ರೀಮಠ, ವಯಾ: 33 ವರ್ಷ ಸಾ: ಶಿರಕೋಳ ತಾ: ನವಲ ಗುಂದ ಇವರನ್ನು ಬಂಧಿಸಿ, ಸದರಿ ಆರೋಪಿತ ರಿಂದ ಅಪಹರಣ ಕೃತ್ಯಕ್ಕೆ ಬಳಸಿದ್ದ ಟಾಟಾ ಸಫಾರಿ ವಾಹನವನ್ನು ಜಪ್ತ ಮಾಡ ಲಾಗಿದೆ ಸದರಿ ಆರೋಪಿತರನ್ನು ಮಾನ್ಯ ನ್ಯಾಯಾಲಯ ಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂದನ ದಲ್ಲಿ ಇರುತ್ತಾರೆ.ಇನ್ನೂ ಪ್ರಕರಣವನ್ನು ಪತ್ತೆ ಹಚ್ಚಿದ ಸಹಾಯಕ ಪೊಲೀಸ್ ಆಯುಕ್ತರು ಧಾರವಾಡ ವಿಭಾಗ ಹಾಗೂ ಉಪ-ವಿಭಾಗದ ಮೂರು ಪೊಲೀಸ್ ಠಾಣೆಯ ಪೊಲೀಸ ಇನ್ಸ ಪೆಕ್ಟರ್ ಹಾಗೂ ಸಿಬ್ಬಂದಿಗಳ ಕಾರ್ಯವೈಖ ರಿಯನ್ನು ಪೊಲೀಸ್ ಆಯುಕ್ತರು, ಹು-ಧಾ, ರವರು ಶ್ಲಾಘಿಸಿರುತ್ತಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.