ಬಳ್ಳಾರಿ –
ಮಂಗನ ಹಾವಳಿಯಿಂದ ಬಳ್ಲಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಗ್ರಾಮಸ್ಥರು ಬೇಸತ್ತಿದ್ದಾರೆ.ಗ್ರಾಮದಲ್ಲಿ ಕಳೆದ ಹಲವಾರು ದಿನಗಳಿಂದ ಮಂಗಗಳು ಅತಿಯಾಗಿ ಕಾಡುತ್ತಿದ್ದು ಎರಡು ದಿನಗಳ ಹಿಂದೆಯಷ್ಟೇ ಮತ್ತೊಂದು ಮಂಗನ ಹಿಂಡು ಮಹಿಳೆಯೊಬ್ಬಳ ಮೇಲೆ ದಾಳಿ ಮಾಡಿದೆ. ಮನೆಯ ಹಿತ್ತಲಿನಲ್ಲಿದ್ದ ವೃದ್ಧೆಯ ಮೇಲೆ ಕೋತಿಯೊಂದು ದಾಳಿ ಮಾಡಿದೆ.ವೃದ್ಧೆಯ ಮೇಲೆ ಏಕಾ ಏಕಿ ದಾಳಿಮಾಡಿದ ಕೋತಿ ತಲೆಯನ್ನು ಪರಚಿದೆ. ಭಾರೀ ರಕ್ತಸಿಕ್ತವಾದ ಗಾಯಗಳನ್ನು ಮಾಡಿದ್ದು ಬಾಯಿ ಹಾಕಿ ಕಡಿಯುವ ಯತ್ನ ಮಾಡಿದೆ.
ವೃದ್ಧೆಯ ಕಿರುಚಾಟ ಕೇಳಿದ ಮನೆಯಲ್ಲಿದ್ದವರೆಲ್ಲಾ ದಾವಿಸಿ ಕೋತಿಯನ್ನೋಡಿಸಿ ವೃದ್ಧೆಯನ್ನು ಕಾಪಾಡಿದ್ದಾರೆ. ಇನ್ನೂ ಗಾಯಗೊಂಡ ವೃದ್ಧೆಯನ್ನು ಕೂಡಲೇ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಹಲವು ತಿಂಗಳುಗಳಿಂದ ಈ ಮತಿಹೀನ ಮಂಗ ಗ್ರಾಮಸ್ಥರ ಮೇಲೆ ಮಿತಿಮೀರಿ ಹಾವಳಿ ಮಾಡುತ್ತಿದೆಯಂತೆ.ಈಗಾಗಲೆ ಹತ್ತಾರು ಜನರಿಗೆ ಕಚ್ಚಿದೆ ಮತ್ತು ಪರಚಿದೆ, ವೃದ್ಧರು ಮಕ್ಕಳು ಮಹಿಳೆಯರಿಗೂ ಕಚ್ಚಿದೆ, ದಿಡೀರ್ ಮನುಷ್ಯರ ಮೇಲೆ ಅಮಾನವೀಯವಾಗಿ ದಾಳಿಮಾಡುತ್ತಿದೆಯಂತೆ.ಮಂಗವನ್ನು ಹಿಡಿದು ಸೂಕ್ತ ಅರಣ್ಯಕ್ಕೆ ಬಿಡುವಂತೆ ಅರಣ್ಯ ಇಲಾಖಾಧಿಕಾರಿಗಳಿಗೆ, ಗ್ರಾಮಪಂಚಾಯ್ತಿ ಯವರಿಗೆ ಮೌಕಿಕವಾಗಿ ಮನವಿ ಮಾಡಲಾಗಿದೆ.
ಆದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಗ್ರಾಮಸ್ಥರು ಬೇಸರವ್ಯಕ್ತಪಡಿಸಿದ್ದಾರೆ.ಇನ್ನೂ ಹಲವರಿಗೆ ಮಂಗ ದಾಳಿಮಾಡಿದ್ದು ತೀವ್ರವಾದ ಗಾಯಗಳಾಗಿವೆ. ಕೆಲವರಿಗೆ ಹೆಚ್ಚಿನ ಪ್ರಮಾಣದಲ್ಲಿ ಪರಚಿದ್ರೆ ಇನ್ನೂ ಕೆಲವರಿಗೆ ಸಣ್ಣ ಪುಟ್ಟ ಗಾಯಗೊಂಡವರು ಕೂಡ್ಲಿಗಿ ಆಸ್ಪತ್ರೆಯಲ್ಲಿ ಹಾಗೂ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಮಂಗನ ಕಾಟದಿಂದಾಗಿ ಗ್ರಾಮಸ್ಥರು ತೀವ್ರ ಆತಂಕಕ್ಕೊಳಾಗಿದ್ದಾರೆ.
ಈ ಕುರಿತಂತೆ ಈವರೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಹೇಳಿದ್ರೂ ಯಾರೂ ಕೂಡಾ ಸ್ಪಂದಿಸುತ್ತಿಲ್ಲ ಕಣ್ತೇರೆದು ನೋಡಿತ್ತಿಲ್ಲ ಹೀಗಾಗಿ ಗ್ರಾಮಸ್ಥರು ಬೇಸರಗೊಂಡಿದ್ದು ಇನ್ನಾದರೂ ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಕಿಡಿಗೇಡಿ ಕೋತಿಯನ್ನು ಹಿಡಿದು ಗ್ರಾಮಸ್ಥರಿಗೆ ನೆಮ್ಮದಿಯನ್ನು ನೀಡುತ್ತಾರೆಯಾ ಎಂಬುದನ್ನು ಕಾದು ನೋಡಬೇಕಿದೆ.