ಪಾಠ ಮಾಡುವಾಗಲೇ ಪ್ರಾಣ ಬಿಟ್ಟ ಶಿಕ್ಷಕಿ – ನೋಡು ನೋಡು ತ್ತಲೇ ಮಕ್ಕಳ ಎದುರಿಗೆ ಸಾವಿಗೀ ಡಾದ ಶ್ರೀದೇವಿ ಟೀಚರ್…..

Suddi Sante Desk

ಆಂಧ್ರಪ್ರದೇಶ –

ಮನುಷ್ಯನಿಗೆ ಸಾವು ಯಾವಾಗ ಹೇಗೆ ಬರುತ್ತದೆ ಎಂಬುದೆ ತಿಳಿಯೊದಿಲ್ಲ ಹೀಗೆ ಇದ್ದವರು ನೋಡು ನೋಡುತ್ತಲೆ ಸಾವಿಗೀಡಾಗುತ್ತಾರೆ.ನಂಬಲಾಗದ ಸಾವುಗಳು ಕಂಡು ಬರುತ್ತಿದ್ದು ಇದಕ್ಕೆ ತಾಜಾ ಉದಾ ಹರಣೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವಾಗಲೇ ಹಠಾತ್ ಹೃದಯಘಾತಕ್ಕೆ ಒಳಗಾಗಿ ಸಾವಿಗೀಡಾದ ಶಿಕ್ಷಕಿಯೊಬ್ಬರು.ಹೌದು ಇಂತಹದೊಂದು ಟೀಚರ್ ಸಾವನಪ್ಪಿರುವ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಪೆದ್ದಪಾರುಪುಡಿ ಮಂಡಲದ ಚಿನ್ನಪಾರು ಪುಡಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮಾಸಿಮುಕ್ಕು ಶ್ರೀದೇವಿ (54) ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗಲೇ ಹೃದಯಾಘಾತಕ್ಕೆ ಒಳಗಾದ ದುರ್ದೈವಿಯಾಗಿದ್ದಾರೆ

ಸಾವಿಗೀಡಾದ ಶಿಕ್ಷಕಿ

ಶಿಕ್ಷಕಿ ಕುಸಿದು ಬೀಳುತ್ತಿದ್ದಂತೆ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಶಿಕ್ಷಕಿ ಈಗಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಶಿಕ್ಷಕರ ಸಂಘದ ಮುಖಂಡ ರು ಮತ್ತು ಶಾಲಾ ಸಿಬ್ಬಂದಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.