ಹುಬ್ಬಳ್ಳಿ –
ಪೊಟೊ ಶೂಟ್ ಗೆ ಹೋಗಿ ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಬಿದ್ದವರಲ್ಲಿ ಇನ್ನೊರ್ವ ಪತ್ತೆಯಾಗಿಲ್ಲ. ನಿನ್ನೆ ನವಲಗುಂದದ ಕಿರೇಸೂರ ಮಲಪ್ರಭಾ ಬಲದಂಡೆ ಕಾಲುವೆಗೆ ಬಿದ್ದಿದ್ದ ಹುಬ್ಬಳ್ಳಿಯ ಐವರಲ್ಲಿ ಇಬ್ಬರನ್ನು ನಿನ್ನೇ ರಕ್ಷಣೆ ಮಾಡಿ ಇನ್ನೂಳಿದ ಮೂವರಲ್ಲಿ ಇಬ್ಬರ ಮೃತ ದೇಹವನ್ನು ಇಂದು ಕಾಲುವೆಯಲ್ಲಿ ಪತ್ತೆ ಮಾಡಲಾಗಿದೆ. ಇನ್ನೂ ಕಾಲುವೆಯಲ್ಲಿ ನಾಪತ್ತೆಯಾಗಿರುವ ಜೋಶಿ ಕ್ಲಮೆಂಟ್ ಜಂಗಮ ಎಂಬ ಯುವಕ ಇನ್ನೂ ಪತ್ತೆಯಾಗಿಲ್ಲ.
ಹುಬ್ಬಳ್ಳಿಯ ಗಾಂಧಿವಾಡದ ಆರ್ ಜೆಎಸ್ ಕಾಲೊನಿಯ ನಿವಾಸಿಯಾಗಿರುವ ಇವನ ಸುಳಿವು ಇನ್ನೂ ಸಿಕ್ಕಿಲ್ಲ. ನಿನ್ನೆ ಸಂಜೆ ಘಟನೆ ನಡೆದ ಮೇಲಿಂದ ಕೂಡಲೇ ಇಬ್ಬರನ್ನು ರಕ್ಷಣೆ ಮಾಡಿ ಇನ್ನಿಬ್ಬರನ್ನು ಇಂದು ಪತ್ತೆ ಮಾಡಲಾಗಿದ್ದು ಇವೆಲ್ಲದರ ನಡುವೆ ಇನ್ನೊರ್ವ ಯುವಕನ ಸುಳಿವು ಈವರೆಗೆ ಸಿಕ್ಕಿಲ್ಲ.
ನಿನ್ನೇಯಿಂದ ಹುಡುಕಾಡಿ ಹುಡುಕಾಡಿ ಕಾರ್ಯಾಚರಣೆ ಮಾಡಿದರೂ ಜೋಶಿಯ ಸುಳಿವು ಸಿಗಲಿಲ್ಲ.
ಇವತ್ತು ಕೂಡಾ ಕಾರ್ಯಾಚರಣೆ ಮಾಡಿದರೂ ನಾಪತ್ತೆಯಾಗಿರುವ ಯುವಕನ ಸುಳಿವು ಮಾತ್ರ ಸಿಗಲಿಲ್ಲ. ಕೊನೆಗೆ ಅನಿವಾರ್ಯವಾಗಿ ಕತ್ತಲಾದ ಹಿನ್ನಲೆಯಲ್ಲಿ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಕಾರ್ಯಾಚರಣೆಯನ್ನು ನಿಲ್ಲಿಸಿದರು.
ಘಟನೆ ನಡೆದು ನಿನ್ನೇಯಿಂದ ಈವರೆಗೆ ಸ್ಥಳದಲ್ಲಿಯೇ ಹುಬ್ಬಳ್ಳಿಯ ಗ್ರಾಮೀಣ ಇನಸ್ಪೇಕ್ಟರ್ ರಮೇಶ ಗೋಕಾಕ್, ಅಣ್ಣಿಗೇರಿ ಪಿಎಸೈ, ನವಲಗುಂದ ಪಿಎಸೈ , ಹಾಗೇ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿಗಳಾದ ನಾರಾಯಣ ಹಿರೇಹೊಳಿ, ಡೇವಿಡ್. ಸೇರಿದಂತೆ ಹಲವು ಸಿಬ್ಬಂದಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು.
ಇನ್ನೂ ಇವರೊಂದಿಗೆ ಹುಬ್ಬಳ್ಳಿಯ ಗ್ರಾಮೀಣ ತಹಶೀಲ್ದಾರ ತಂಡವು ಕೂಡಾ ಪಾಲ್ಗೊಂಡಿದ್ದರು. ಇನ್ನೂ ಇವರೊಂದಿಗೆ ಅಗ್ನಿಶಾಮಕ ದಳದ ಎರಡು ವಾಹನಗಳ 15 ಕ್ಕೂ ಹೆಚ್ಚು ಸಿಬ್ಬಂದಿಗಳು ಕೂಡಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಶೋಧ ಕಾರ್ಯವನ್ನು ಮಾಡಿದರು ಕೂಡಾ ಕೊನೆಗೂ ಜೋಶಿ ಸುಳಿವು ಸಿಗಲಿಲ್ಲ.
ಕತ್ತಲಾದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಶೋಧ ಕಾರ್ಯವನ್ನು ನಿಲ್ಲಿಸಲಾಯಿತು. ಇನ್ನೂ ಇತ್ತ ಸುಳಿವು ಸಿಗದ ಜೋಶಿಯ ಕುರಿತಂತೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.