ಹುಬ್ಬಳ್ಳಿ –
ಮೂರುಸಾವಿರಮಠದ ಆಸ್ತಿ ವಿವಾದ ಕುರಿತಂತೆ ಉನ್ನತ ಸಮಿತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ದಿಂಗಾಲೇಶ್ವರ ಶ್ರೀಗಳ ವಿರುದ್ದ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಕಿಡಿಕಾರಿದರು. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಾಮಿಜಿಗಳ ವಿರುದ್ಧ ಕಿಡಿಕಾಡಿದರು.
ನಗರದಲ್ಲಿಂದು ಮಾತನಾಡಿದ ಅವರು,ನಾನು ಮಠದ ಉನ್ನತ ಸಮಿತಿ ಸದಸ್ಯ. ಸ್ವಾಮೀಜಿಗಳು, ದೊಡ್ಡವರು . ಅವರ ಬಾಯಲ್ಲಿ ಯಾವ ರಕ್ತದಲ್ಲಿ ಹುಟ್ಟಿದ್ದಾರೆ ಎಂಬ ಮಾತುಗಳನ್ನಾಡಿದ್ರೆ ನಾನು ಉತ್ತರ ಕೊಡಲ್ಲ.ಮಠದಿಂದ ತಪ್ಪಾಗಿದ್ರೆ ಸರಿಪಡಿಸುತ್ತೇವೆ. ಸಾಮಾನ್ಯ ವ್ಯಕ್ತಿ ಹೇಳಿದ್ರು ಸಹ ಸರಿ ಮಾಡ್ತಿವಿ. ಈಗಾಗಲೇ ಮಠದ ಉನ್ನತ ಸಮಿತಿ ಸಭೆ ಕರೆಯುವಂತೆ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಹೇಳಿದ್ದೇನೆ ಎಂದರು.
ಕೆಎಲ್ ಇ ಸಂಸ್ಥೆಗೆ ಭೂಮಿ ನೀಡಿದ್ದು,ಎಲ್ಲ ಪಕ್ಷದವರು , ಎಲ್ಲಾ ಮಠಾಧೀಶರು ಸೇರಿ ದೊಡ್ಡ ಸ್ವಾಮಿಜಿಗಳು ಇದ್ದಾಗ ನಿರ್ಧಾರ ಆಗಿದ್ದು ಎಂದರು.
ಮೆಡಿಕಲ್ ಕಾಲೇಜು ಕಟ್ಟಲು ಕೆಎಲ್ ಇ ಸಂಸ್ಥೆಗೆ ನೀಡಿದ ಭೂಮಿಯನ್ನು ಮರಳಿ ಪಡೆಯುವ ವಿಚಾರ ನಮ್ಮ ಮುಂದಿಲ್ಲ ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವರು ಸ್ವತಂತ್ರ, ಅದಕ್ಕೆ ನಾವು ಉತ್ತರ ಕೊಡುವುದಿಲ್ಲ ಎಂದರು.