ACB ಬಲೆಗೆ ಭ್ರಷ್ಟ ಸರ್ಕಾರಿ ಆಸ್ಪತ್ರೆಯ ವೈದ್ಯ – ಬಾಣಂತಿ ಮಹಿಳೆಯ ಬಿಡುಗಡೆಗೆ ಹಣದ ಬೇಡಿಕೆ ಇಟ್ಟಿದ್ದ ವೈದ್ಯ…..

Suddi Sante Desk

ಬೆಳಗಾವಿ –

ಆಗ ತಾನೇ ಶಸ್ತ್ರ ಚಿಕಿತ್ಸೆ ಯೊಂದಿಗೆ ಹೆರಿಗೆಯಾಗಿದ್ದ ಬಾಣಂತಿ ಮಹಿಳೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ಹಣದ ಬೇಡಿಕೆ ಇಟ್ಟಿದ್ದ ಸರ್ಕಾರಿ ಆಸ್ಪತ್ರೆ ಯ ವೈದ್ಯನೊಬ್ಬ ಬೆಳಗಾವಿ ಯಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.ಹೌದು ಹೆರಿಗೆ ಶಸ್ತ್ರಕ್ರಿಯೆಗೊಳಗಾಗಿದ್ದ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲು ವಿನಾಕಾರಣ ವಿಳಂಬ ಮಾಡುತ್ತಿದ್ದ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯ ಸರ್ಜನ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಎಸಿಬಿ ಅಧಿಕಾರಿಗಳು ಲಂಚದ ಸಮೇತ ವೈದ್ಯನನ್ನು ವಶಕ್ಕೆ ಪಡೆದಿದ್ದಾರೆ. ಡಾ.ವಿರೇಂದ್ರ ಕುಚಬಾಳ ಎಸಿಬಿ ಬಲೆಗೆ ಬಿದ್ದ ವೈದ್ಯನಾಗಿದ್ದಾರೆ‌‌.

ಶಸ್ತ್ರಚಿಕಿತ್ಸೆಗೊಳಗಾಗಿದ್ದ ಕಿತ್ತೂರು ತಾಲೂಕು ದಾಸ್ತಿಕೊಪ್ಪ ಮೂಲದ ಮಹಿಳೆಯನ್ನು ಆಸ್ಪತ್ರೆಯ ಹೆರಿಗೆ ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು.ಮಹಿಳೆಯ ನ್ನು ಡಿಸ್ಚಾರ್ಜ್ ಮಾಡಲು ವೈದ್ಯ 7 ಸಾವಿರ ರೂಪಾ ಯಿಗೆ ಬೇಡಿಕೆ ಇಟ್ಟಿದ್ದರು.ಲಂಚ ನೀಡಲು ವಿಳಂಬ ವಾಗುತ್ತಿದ್ದ ಕಾರಣಕ್ಕೆ ಮಹಿಳೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿರಲಿಲ್ಲ.ವೈದ್ಯನ ವರ್ತನೆಯಿಂದ ಬೇಸತ್ತ ಮಹಿಳೆಯ ಪತಿ ಯಲ್ಲಪ್ಪ ಕೋಲಕಾರ ಎಸಿಬಿ ಗೆ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಡಾ.ವಿರೇಂದ್ರ ಕುಚಬಾಳ ಅವರನ್ನು ಲಂಚ ಸ್ವೀಕರಿಸುವಾಗ ವಶಕ್ಕೆ ಪಡೆದಿದ್ದಾರೆ. ಎಸಿಬಿ ಎಸ್ಪಿ ಬಿ ಎಸ್ ನ್ಯಾಮಗೌಡರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಜೆ ಎಂ ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಗಳಾದ ಹೆಚ್ ಸುನೀಲ್ ಕುಮಾರ್ ಎ ಎಸ್ ಗುದಿಗೊಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಯಲ್ಲಿ ಭಾಗಿಯಾಗಿದ್ದರು. ಇನ್ನೂ ಸಧ್ಯ ಡಾಕ್ಟರ್ ನ ನ್ನು ಬಂಧನ ಮಾಡಿರುವ ಎಸಿಬಿ ಅಧಿಕಾರಿಗಳು ಮುಂದಿನ ತನಿಖೆ ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.