ಮಹಾಮಾರಿ ಕರೊನಾ ಗೆ ರಾಜ್ಯ ದಲ್ಲಿ ಮತ್ತೊರ್ವ ಶಿಕ್ಷಕ ಸಾವು – ನಿವೃತ್ತಿಗೆ ಒಂದೇ ತಿಂಗಳು ಇರುವಾ ಗಲೇ ಸಾವಿಗೀಡಾದ ಸರಳ ಸಜ್ಜನಿ ಕೆಯ ಮಾಸ್ತರ್ – ಮನೆಯಲ್ಲಿಯೇ ಭಯಗೊಂಡು ನೋಡು ನೋಡುತ್ತ ಲೆ ಸಾವಿಗೀಡಾದ ಹೃದಯವಂತ

Suddi Sante Desk

ಬೈಲಹೊಂಗಲ –

ಮಹಾಮಾರಿ ಕರೋನಾ ರಾಜ್ಯದಲ್ಲಿ ದಿನದಿಂದ ದಿನಕ್ಕೆ ತನ್ನ ಆರ್ಭಟವನ್ನು ಹೆಚ್ಚಿಸುತ್ತಲೇ ಇದೆ. ದಿನದಿಂದ ದಿನಕ್ಕೆ ರಾಜ್ಯದಲ್ಲೂ ಕೂಡಾ ಕೋವಿಡ್ ಅಬ್ಬರ ಹೆಚ್ಚಾಗುತ್ತಿದ್ದು ಇನ್ನೂ ಇದಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.ಅದರಲ್ಲೂ ಶಿಕ್ಷಕರು ಕೂಡಾ ಸಾವಿಗೀಡಾಗುತ್ತಿದ್ದು ಈಗ ಮತ್ತೊಬ್ಬ ಪ್ರಧಾನ ಗುರುಗಳು ಬಲಿಯಾಗಿದ್ದಾರೆ.

ಹೌದು ಬೆಳಗಾವಿ ಜಿಲ್ಲೆಯ ನೇಸರಗಿಯ ಕುವೆಂಪು ಶತಮಾನೋತ್ಸವ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾಗಿದ್ದ ಬಸವರಾಜ ಯಲ್ಲಪ್ಪ ಬಾಗಲೆ ಸಾವಿಗೀಡಾದ ಪ್ರಧಾನ ಗುರುಗಳಾಗಿದ್ದಾರೆ ಕಳೆದ ಎರಡು ಮೂರು ದಿನಗಳಿಂದ ಮನೆಯಲ್ಲಿದ್ದ ಇವರು ಕೋವಿಡ್ ಪದವನ್ನು ಯಾರೋಹೇಳಿದ್ದಾರೆ.

ಇದನ್ನು ಕೇಳಿದ ಇವರು ಭಯಗೊಂಡು ಕುಸಿದು ಬಿದ್ದಿದ್ದಾರೆ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ದಾರಿ ಮಧ್ಯದಲ್ಲಿ ಸಾವಿಗೀಡಾಗಿದ್ದಾರೆ. ವಿಶೇಷವೆಂದರೆ ಮುಂದಿನ ತಿಂಗಳು ಮೇ 31 ನಿವೃತ್ತಿ ಯಾಗಲಿದ್ದು ನಿವೃತ್ತಿಯ ಮುಂಚೆಯೇ ಸಾವಿಗೀಡಾಗಿದ್ದಾರೆ ಇನ್ನೂ ಅಗಲಿದ ಹಿರಿಯ ಸರಳ ಸಜ್ಜನಿಕೆಯ ಬಸವರಾಜ ಸರ್ ಅಗ ಲಿಕೆಯಿಂದ ಶಿಕ್ಕಕ ಬಂಧುಗಳಾದ ಸಂಗಮೇಶ ಕನ್ನಿ ನಾಯ್ಕರ್,ಎಲ್ ಐ ಲಕ್ಕಮ್ಮನವರ,ಶರಣಬಸವ ಬನ್ನಿಗೋಳ,ಶಿವಕುಮಾರ್, ಮಲ್ಲಿಕಾರ್ಜುನ ಉಪ್ಪಿ ನ, ಅಶೋಕ ಸಜ್ಜನ ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಸಂತಾಪವನ್ನು ಸೂಚಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.