ಬೀದರ್ –
ಗಣರಾಜ್ಯೋತ್ಸವದ ದಿನದಂದು ಪುರಸಭೆ ಕಟ್ಟಡದ ಮೇಲಿಂದ ಆತ್ಮಹತ್ಯೆ ಗೆ ಯತ್ನಿಸಿದ ಘಟನೆಯೊಂದು ಬೀದರ್ ನಲ್ಲಿ ನಡೆದಿದೆ.
ಬೀದರ್ ಪುರಸಭೆ ನೌಕರರೇ ಆತ್ಮಹತ್ಯೆಗೆ ಯತ್ನಿಸಿದ ನೌಕರನಾಗಿದ್ದಾನೆ.ಕಳೆದ ಆರು ತಿಂಗಳಿಂದ ಸಂಬಳ ಆಗುತ್ತಿಲ್ಲ,ಅಧಿಕಾರಿಗಳು ಸಿಕ್ಕಾಪಟ್ಟಿ ಕಿರುಕುಳ ಕೊಡುತ್ತಿದ್ದಾರೆಂದು ನೊಂದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಬೀದರ್ ನ ಚಿಟಗುಪ್ಪಾ ಪುರಸಭೆ ಪೌರ ಸಿಬ್ಬಂದಿ ಗಣರಾಜ್ಯೋತ್ಸವ ದಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ
ಕಳೆದ ಆರು ತಿಂಗಳಿಂದ ಸಂಬಳವಿಲ್ಲ,ಮೇಲಿಂದ ಮೇಲೆ ಅಧಿಕಾರಿಗಳು ಕಿರುಕುಳ ಕೋಡತಾ ಇದ್ದಾರೆ ಇದೆಲ್ಲದರಿಂದ ಬೇಸತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪುರಸಭೆ ಕಟ್ಟಡದ ಮೇಲಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಪುರಸಭೆ ನೌಕರ ರಘು
ಒಂದು ಕಡೆ ಗಣರಾಜ್ಯೋತ್ಸವದ ಕಾರ್ಯಕ್ರಮ ಮತ್ತೊಂದು ಕಡೆ ಏಕಾಏಕಿಯಾಗಿ ಆತ್ಮಹತ್ಯೆಗೆ ಯತ್ನಿಸಿದ ರಘು ನನ್ನು ನೋಡಿ ಸ್ಥಳದಲ್ಲಿ ಇದ್ದ ಇನ್ನಿತರ ಸಿಬ್ಬಂದಿ ಗಳಿಂದ ಪುರಸಭೆ ಸಿಬ್ಬಂದಿಯನ್ನು ರಕ್ಷಣೆ ಮಾಡಿದರು.
ಬೀದರ್ ಜಿಲ್ಲೆಯ ಚಿಟಗುಪ್ಪಾ ಪುರಸಭೆ ಯಲ್ಲಿ ಈ ಒಂದು ಘಟನೆ ನಡೆದಿದ್ದು ಸಧ್ಯ ರಘು ನನ್ನು ಹಿರಿಯ ಅಧಿಕಾರಿಗಳು ವಿಚಾರಣೆ ಮಾಡ್ತಾ ಇದ್ದಾರೆ.ಏನೇ ಆಗಲಿ ಆರೇಳು ತಿಂಗಳಿನಿಂದ ವೇತನ ನೀಡದೆ ಮತ್ತೆ ಕಿರುಕುಳ ನೀಡುತ್ತಿರುವ ಅಧಿಕಾರಿಗಳ ಕಿವಿ ಹಿಂಡುವ ಕೆಲಸ ಆಗಬೇಕಿದೆ.