ವೇಶ್ಯಾವಾಟಿಕೆ ಜಾಲ ಪತ್ತೆ – ಜೂನಿಯರ್ ನಟಿಯರನ್ನಿಟ್ಟು ಕೊಂಡು ವೇಶ್ಯಾವಾಟಿಕೆ ಮಾಡುತ್ತಿದ್ದ ಸಿನೆಮಾ ಪ್ರೊಡ್ಯೂಸರ್ ಬಂಧ‌ನ‌…..

Suddi Sante Desk

ಹೈದರಾಬಾದ್ –

ಚಿತ್ರರಂಗದಲ್ಲಿ ಜೂನಿಯರ್ ನಟಿಯರನ್ನಿಟ್ಟು ಕೊಂಡು ಹೈಟೆಕ್ ರೀತಿಯಲ್ಲಿ ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದ ಜಾಲವೊಂದು ಹೈದರಾಬಾದ್ ನಲ್ಲಿ ಪತ್ತೆಯಾಗಿದೆ. ಹೌದು ಸಿನಿಮಾ ಪ್ರೊಡ್ಯೂಸರ್ ಒಬ್ಬ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಪರಿಚಯವಿದ್ದ ಜೂನಿಯರ್ ನಟಿಯನ್ನು ಇಟ್ಟುಕೊಂಡು ವೇಶ್ಯಾ ವಾಟಿಕೆ ನಡೆಸುತ್ತಿದ್ದ ಆತನನ್ನು ಹೈದರಾಬಾದ್ ನ ಸರೋರ್ ನಗರ ಪೊಲೀಸರು ಬಂಧಿಸಿದ್ದಾರೆ.

ಹೌದು ಬಂಧಿತನಾಗಿರುವ ಸಿನಿಮಾ ಪ್ರೊಡ್ಯೂಸರ್, ಸುಧೀರ್ (31) ಎಂದು ಗುರುತಿಸಲಾಗಿದೆ. ಕರೊನಾ ಲಾಕ್ಡೌನ್ ಸಮಯದಲ್ಲಿ ಜಾಲತಾಣದಲ್ಲಿ ಮಹಿಳೆ ಯರ ಅರೆಬೆತ್ತಲೆ ಫೋಟೋ ಹಾಕಿ ದಂಧೆಗೆ ಯುವ ಕರನ್ನು ಸೆಳೆಯುತ್ತಿದ್ದ ಎಂಬುದು ಪೊಲೀಸರಿಗೆ ಗೊತ್ತಾಗಿದೆ ಹೀಗಾಗಿ ಮಾಹಿತಿ ತಿಳಿದ ಪೊಲೀಸರು ದಾಳಕ ಮಾಡಿದ್ದಾರೆ

ಈ ವೇಶ್ಯಾವಾಟಿಕೆ ದಂಧೆ ನಡೆಸಲು ಮಧಪುರ್ ನ ಅಯ್ಯಪ್ಪ ಸೊಸೈಟಿಯಲ್ಲಿ ಮನೆಯೊಂದನ್ನು ಬಾಡಿ ಗೆ ಪಡೆದಿದ್ದನು.ಲೊಕೆಂಟೋ ಡೇಟಿಂಗ್ ವೆಬ್ ಸೈಟ್ ನಲ್ಲಿ ಹುಡುಗಿಯರ ಅರೆ ಬೆತ್ತಲೆ ಫೋಟೋ ಗಳನ್ನು ಪೋಸ್ಟ್ ಮಾಡಿ ಯುವಕರನ್ನು ಈ ಮೂಲಕ ಇವನು ಸೆಳೆಯುತ್ತಿದ್ದನು.

ಅವರೊಂದಿಗೆ ಫೋನ್ ಮೂಲಕ ಸಂಪರ್ಕಿಸಿ ವ್ಯವ ಹಾರ ನಡೆಸುತ್ತಿದ್ದನು.ಈ ಬಗ್ಗೆ ಮಾಹಿತಿ ಪಡೆದು ಕೊಂಡ ರಾಚಕೊಂಡ ಮಾನವ ಕಳ್ಳಸಾಗಾಣೆ ವಿರೋಧಿ ಘಟಕದ ಪೊಲೀಸರು, ಸರೋರ್ ನಗರ ಠಾಣೆಗೆ ತಿಳಿಸಿದ್ದಾರೆ.ಆಗ ವಿಷಯ ತಿಳಿದ ಅಲ್ಲಿಯ ಪೊಲೀಸರು ಸುಧೀರ್ ನನ್ನು ಬಂಧಿಸಿದ್ದಾರೆ.

ಸುಧೀರ್ ಖಮ್ಮಮ್ ಜಿಲ್ಲೆಯ ಸತ್ತುಪಲ್ಲಿ ಮೂಲದ ವರಾಗಿದ್ದು 10 ವರ್ಷಗಳ ಹಿಂದೆ ಹೈದರಾಬಾದ್ ಗೆ ಬಂದು ಮಧಪುರ್ ನಲ್ಲಿ ನೆಲೆಸಿದ್ದರು.ಸಿನಿಮಾ ಪ್ರೊಡಕ್ಷನ್ನೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯನಿ ರ್ವಹಿಸುತ್ತಿರುವದರಿಂದ ಸಹಜವಾಗಿಯೇ ಕಲಾವಿ ದರು ಪರಿಚಯವಿರುತ್ತರೆ.ಅದರಲ್ಲಿ ಕೆಲವು ಕಿರಿಯ ಕಲಾವಿದರನ್ನು ಈ ವೇಶ್ಯಾವಾಟಿಕೆಗೆ ದೂಡಿ ಹಣ ಮಾಡಲು ಮುಂದಾಗಿದ್ದನು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.