ಶೈಲಜಾ ಟೀಚರ್ ಗೆ ಕೈ ತಪ್ಪಿತು ಮಂತ್ರಿ ಸ್ಥಾನ – ಕಾರಣ ಮಾತ್ರ ನಿಗೂಢ…..

Suddi Sante Desk

ಕೇರಳ –

ಕೇರಳದಲ್ಲಿ ಹೊಸ ಸಂಪುಟ ರಚನೆಯಾಗಿಎರಡನೇ ಬಾರಿಗೆ ಪಿಣರಾಯಿ ಅವರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಕಾರ್ಯಕ್ರಮ ನಡೆದರೂ ಇಡೀ ಕೇರಳದಲ್ಲಿ ಇವತ್ತು ಬಹು ಚರ್ಚಿತವಾದ ವಿಷಯ ಈ ಹಿಂದೆ ಆರೋಗ್ಯ ಮಂತ್ರಿಯಾಗಿದ್ದ ಕೆ.ಕೆ. ಶೈಲಜಾ ಟೀಚರ್ ಅವರಿಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ಕೊಟ್ಟಿಲ್ಲ ಅನ್ನೋದು.ಕೇರಳದಲ್ಲಿ ಬಹು ಸಂಖ್ಯೆಯ ಲ್ಲಿರುವ ಮತ್ತು ಅನಾದಿ ಕಾಲದಿಂದಲೂ ಎಡರಂಗದ ಪಕ್ಷಗಳನ್ನು ಬೆಂಬಲಿಸುತ್ತಾ ಬಂದಿರುವ ಸಮುದಾ ಯವನ್ನು ಈ ಟೀಚರಮ್ಮ ಪ್ರತಿನಿಧಿಸುತ್ತಾರೆ. ಸಾಲ ದಕ್ಕೆ ಈ ಬಾರಿಯೂ ಕೂಡ ಮಲಬಾರ್ ಪ್ರಾಂತ್ಯದ ಮತ್ತನೂರು ಕ್ಷೇತ್ರದಿಂದ 60 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿದ್ದರು ಈ ಹಿಂದೆ ಸಾಕಷ್ಟು ಪ್ರಮಾಣದಲ್ಲಿ ಕೆಲಸವನ್ನು ಮಾಡಿದ್ದ ಈ ಟೀಚರ್ ಅಮ್ಮ‌ನಿಗೆ ಸಚಿವ ಸ್ಥಾನ ಕೈತಪ್ಪಿದೆ

ಕಳೆದ ಐದು ವರ್ಷಗಳೂ ಕೂಡ ಕೇರಳ ಪ್ರಭುತ್ವಕ್ಕೆ ಒಂದಲ್ಲೊಂದು ಟಾಸ್ಕ್ ಕೊಟ್ತಾನೆ ಬಂದವು. ಅದರ ಲ್ಲೂ ಆರೋಗ್ಯ ಇಲಾಖೆಗೆ ಸಮಸ್ಯೆಗಳ ಸರಮಾಲೆ ಯನ್ನೇ ತಂದೊಡ್ಡಿದ್ದು ಸುಳ್ಳಲ್ಲ. ನಿಫಾ ಸೋಂಕು ಬಂದು ಕೇರಳದ ಕದತಟ್ಟಿದಾಗ ಶೈಲಜಾ ಟೀಚರ್ ನಿದ್ರೆ ನೀರಡಿಕೆ ಬಿಟ್ಟು ಸೋಂಕನ್ನು ಕೇರಳದಿಂದ ಓಡಿಸಿದರು. ಅದಾದ ಕೂಡಲೇ ಪ್ರವಾಹದ ಜೊತೆ ಕೇರಳಕ್ಕೆ ನುಗ್ಗಿದ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಯಶಸ್ವಿಯಾದರು.

ಅದರಲ್ಲೂ ಚುನಾವಣೆ ವರ್ಷದಲ್ಲಿ ಕಾಡಿದ ಕೋವಿ ಡ್ ಸೋಂಕನ್ನು ಇದೇ ಶೈಲಜಾ ಟೀಚರ್ ಆರೋಗ್ಯ ಮಂತ್ರಿಯಾಗಿ ಉತ್ತಮವಾಗಿ ನಿಭಾಯಿಸಿದರು ಅವ ರ ಕೆಲಸ ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಯ್ತು ಅಂದರೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೊಗಳಿತು. ಸಾಲದಕ್ಕೆ ಒಳ್ಳೆಯ ಕೆಲಸಕ್ಕೆ ಮತ್ಸರ ಯಾಕೆ ಅಂತ ಲೇ ಏನು ಪ್ರಧಾನಿ ಮೋದಿ ಅವರು ಕೂಡ ಟೀಚರ್ ಅವರ ಕೆಲಸ ನಿರ್ವಹಣೆಗೆ ಫುಲ್ ಮಾರ್ಕ್ ಹಾಕಿ ದರು.



ಬಹುಶಃ ಅವರ ಅಂದಿನ ಉತ್ತಮ ಮ್ಯಾನೇಜ್‌ ಮೆಂಟ್ ಕೌಶಲ್ಯವೇ ಇಂದು ಮಂತ್ರಿ ಪದವಿ ತಪ್ಪಿಸಿ ತು ಅನ್ನೋದು ಕೇರಳ ರಾಜಕೀಯ ಪಂಡಿತರ ಲೆಕ್ಕಾ ಚಾರ.ಅವರ ಕೆಲಸಕ್ಕೆ ಎಡರಂಗದ ಹೈಕಮಾಂಡ್ ಕೂಡ ಅಸೂಯೆ ಪಟ್ಟಿತ್ತಂತೆ. ಟೀಚರ್ ಅವರ ಕೆಲ ಸಕ್ಕೆ ಹೊಗಳಿಕೆ ಶುರುವಾದ ಕೂಡಲೇ ಎಡರಂಗದ ಹೈಕಮಾಂಡ್ ಕೊರೋನಾ ಕುರಿತು ಮಾಧ್ಯಮಗಳ ಹೇಳಿಕೆ ಕೊಡುವ ಜವಾಬ್ದಾರಿಯನ್ನು ಸಿಎಂ ಪಿಣ ರಾಯಿ ವಿಜಯನ್ ಅವರೇ ವಹಿಸಿಕೊಳ್ಳಬೇಕು ಅಂಥ ಸೂಚಿಸಿತು. ಇಷ್ಟೊಂದು ಒಳ್ಳೆಯ ಕೆಲಸ ಮಾಡಿದ ಇವರಿಗೆ ಇಂದು ಸಚಿವ ಸಂಪುಟದಲ್ಲಿ ಅವಕಾಶ ನೀಡಿಲ್ಲ ಎಂಬೊದೆ ಬೇಜಾರದ ಸಂಗತಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.