ನವಲಗುಂದ –
ಕಳೆದ ಮೂವತ್ತು ವರುಷಗಳಿಂದ ನಗರದ ಗಾಂಧಿ ಮಾರುಕಟ್ಟೆಯಲ್ಲಿದ್ದ ಕಾಯಿಪಲ್ಲೆ ಮಾರುಕಟ್ಟೆ ಯನ್ನು ಬೇರೆ ಕಡೆ ಶಿಪ್ಟ್ ಮಾಡಿದ್ದಾರೆ
ಜನದಟ್ಟಣೆ ವಾಹನ ಸಂಚಾರದ ಸಮಸ್ಯೆಯಿಂದಾಗಿ ಈ ಒಂದು ಮಾರುಕಟ್ಟೆಯನ್ನು ಶಿಪ್ಟ್ ಮಾಡಿದ್ದಾರೆ . ಸರಿಯಾದ ವಿಚಾರ ಆದರೆ ಕಳೆದ 30 ವರುಷಗ ಳಿಂದ ಇಲ್ಲಿದ್ದ ಮಾರುಕಟ್ಟೆಯನ್ನು ಏಕಾಎಕಿಯಾಗಿ ಶಿಪ್ಟ್ ಮಾಡುವ ಮುಂಚೆ ಪುರಸಭೆಯವರು ಮೊದಲು ವ್ಯಾಪಾರಸ್ಥರೊಂದಿಗೆ ಸಭೆಯನ್ನು ಮಾಡಿ ಚರ್ಚೆ ಮಾಡಬೇಕಿತ್ತು
ಆದರೆ ಯಾವುದನ್ನು ಮಾಡದೇ ಏಕಾಎಕಿಯಾಗಿ ಶಿಪ್ಟ್ ಮಾಡಿದ್ದಾರೆ. ಸಧ್ಯ ಗಾಂಧಿ ಮಾರುಕಟ್ಟೆ ಯಿಂದ ಅಣ್ಣಿಗೇರಿ ರಸ್ತೆಯಲ್ಲಿರುವ ಎಪಿಎಮ್ ಸಿ ಶಿಪ್ಟ್ ಮಾಡಿದ್ದಾರೆ.
ಒಂದು ಹೇಳದೆ ಕೇಳದೆ ಶಿಪ್ಟ್ ಮಾಡಿದ್ದು ಮತ್ತೊಂದು ಅಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದಿರುವುದು ಮತ್ತೊಂದು ಸಾರ್ವಜನಿಕರಿಗೆ ಅಲ್ಲಿಗೆ ಹೋಗಲು ತೊಂದರೆ ಮತ್ತೊಂದು
ವ್ಯಾಪಾರಿಗಳಿಗೆ ಅಲ್ಲಿಗೆ ಹೋದರು ಸರಿಯಾದ ವ್ಯಾಪಾರವಾಗದಿರುವುದು ಹೀಗಾಗಿ ಸಾಕಷ್ಟು ಸಮಸ್ಯೆ ತೊಂದರೆಗಳ ನಡುವೆ ಶಿಪ್ಟ ಮಾಡಿದ್ದು ಈಗ ವ್ಯಾಪಾರಿಗಳ ಮತ್ತು ಸಾರ್ವಜನಿಕರ ಕೆಂಗಣ್ಣಿಗೆ ಅಧಿಕಾರಿಗಳು ಗುರಿಯಾಗಿದ್ದಾರೆ.
ಸಾಮಾನ್ಯವಾಗಿ ಯಾವುದೇ ಒಬ್ಬರು ಪಟ್ಟಣದ ಹೃದಯಭಾಗದಲ್ಲಿರುವ ಗಾಂಧೀ ಮಾರುಕಟ್ಟೆಗೆ ಬಂದರೆ ಒಂದೆ ಕಡೆ ಕಾಯಿಪಲ್ಲೆ ಮತ್ತೊಂದೆಡೆ ಕಿರಾಣಿ ಮತ್ತೊಂದು ವಸ್ತು ಬೇಕಾದರೆ ಹೀಗೆ ಎಲ್ಲವೂ ಒಂದೆ ಕಡೆ ಸಿಗುತ್ತಿದ್ದವು ಆದರೆ ಈಗ ಏಕಾಎಕಿಯಾಗಿ ಗಾಂದೀ ಮಾರುಕಟ್ಟೆಯಿಂದ ಕಾಯಿಪಲ್ಲೆ ವ್ಯಾಪಾರವನ್ನು
ಏಕಾಎಕಿಯಾಗಿ ಶಿಪ್ಟ್ ಮಾಡಿದ್ದು ಸಾಕಷ್ಟು ತೊಂದರೆಯನ್ನುಂಟು ಮಾಡಿದೆ. ಕೂಡಲೇ ಇದನ್ನು ರದ್ದು ಮಾಡಿ ಮೊದಲಿನಂತೆಯೇ ಗಾಂಧಿ ಮಾರುಕಟ್ಟೆಗೆ ಅನುಕೂಲ ಮಾಡಿಕೊಡಬೇಕು
ಇಲ್ಲವಾದರೆ ಹೋರಾಟ ಮಾಡುವ ಎಚ್ಚರಿಕೆಯನ್ನು
ಕರ್ನಾಟಕ ಬೀದಿ ಬದಿಯ ವ್ಯಾಪಾರಿಗಳ ಸಂಘದ ಒಕ್ಕೂಟದ ಅಧ್ಯಕ್ಷ ರಿಯಾಜ್ ಅಹಮ್ಮದ್ ನಬೀಸಾಬ್ ನಾಸಿಪುಡಿ ಹೇಳಿದ್ದಾರೆ. ಸಧ್ಯ ಮೂರು ನಾಲ್ಕು ದಿನಗಳಿಂದ ಇದನ್ನು ಶಿಪ್ಟ್ ಮಾಡಿದ್ದು ಸರಿಯಾಗಿ ವ್ಯಾಪಾರ ವಹಿವಾಟು ಆಗುತ್ತಿಲ್ಲ ಎಂದಿದ್ದಾರೆ.