ಅಹಮದನಗರ –
ಈಗಾಗಲೇ ಹತ್ತು ಹಲವಾರು ಸಾಧನೆಗಳನ್ನು ಮಾಡಿ ಪ್ರಶಸ್ತಿ ಗಳನ್ನು ಮಡಿಲಿಗೆ ಹಾಕಿಕೊಂಡಿರುವ ಇನ್ಸ್ಪೆಕ್ಟರ್ ಮುರಗೇಶ ಚೆನ್ನಣ್ಣನವರ ಮತ್ತೊಂದು ಸಾಧನೆಯೊಂದಿಗೆ ಐತಿಹಾಸಿಕ ದಾಖಲೆಯನ್ನು ಮಾಡಿದ್ದಾರೆ.
ಇಂದು ನಡೆದ ಸ್ಪರ್ಧೆಯಲ್ಲಿ “ಕರ್ನಾಟಕ ಪೊಲೀಸ್” ಹೆಮ್ಮೆಯನ್ನು ಹೆಚ್ಚಿಸಿದ್ದಾರೆ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ.ದೇಶದ ಮೂಲೆ ಮೂಲೆಯಿಂದ ಬಂದಿದ್ದ ಪ್ರೋಪೆಷನಲ್ ಕ್ರೀಡಾಪಟುಗಳ ನಡುವೆಯೂ ಪೊಲೀಸ್ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಮಾಡಿರೋ ಸಾಧನೆ ದೊಡ್ಡದು.
ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಹೊಸದೊಂದು ಮೈಲಿಗಲ್ಲು ಮೂಡಿಸುವಲ್ಲಿ ಹುಬ್ಬಳ್ಳಿ ಹೆಸ್ಕಾಂ ಜಾಗೃತದಳದ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಯಶಸ್ವಿಯಾಗಿದ್ದು, ಬೇರೆ ರಾಜ್ಯದಲ್ಲಿ ರಾಜ್ಯದ ಕೀರ್ತಿ ಪತಾಕೆಯನ್ನ ಹಾರಿಸಿದ್ದಾರೆ.
ಮಹಾರಾಷ್ಟ್ರದ ಅಹಮದನಗರದಲ್ಲಿ ನಡೆದಿ ಸ್ಪರ್ಧೆಯಲ್ಲಿ 23.1 ಕಿಲೋಮೀಟರ್ ರನ್ನಿಂಗ್, 90 ಕಿಲೋಮೀಟರ್ ಸೈಕ್ಲಿಂಗ್ ನ್ನು ಕೇವಲ 5 ಗಂಟೆ 7 ನಿಮಿಷದಲ್ಲಿ ಪೂರೈಸಿ, ತಮ್ಮ ‘ಏಜ್’ ಕೆಟಗೇರಿಯಲ್ಲಿ ಮೊದಲ ಸ್ಥಾನವನ್ನೂ, ಓವರ್ ಆಲ್ ಸ್ಪರ್ಧೆಯಲ್ಲಿ ಎರಡನೇಯ ಸ್ಥಾನವನ್ನು ಗಳಿಸಿದ್ದಾರೆ.
ರಾಜ್ಯದ ಪೊಲೀಸ್ ಇತಿಹಾಸದಲ್ಲಿ ಇದು ಮೊದಲ ಬಾರಿಯಾಗಿದೆ.ಹೆಸ್ಕಾಂ ಜಾಗೃತ ದಳದಲ್ಲಿರುವ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಅವರ ಈ ಸಾಧನೆ ರಾಜ್ಯದ ಪೊಲೀಸ್ ಇಲಾಖೆಗೆ ಕೊಡುಗೆಯಾಗಿದೆ.
ಇಂತಹದೊಂದು ಸಾಧನೆ ಮಾಡುವಲ್ಲಿ ಮುರುಗೇಶ ಚೆನ್ನಣ್ಣನವರ ಪರಿಶ್ರಮ ನಿರಂತರವಾಗಿತ್ತು. ಇದೀಗ ಮತ್ತೊಂದು ಸಾಧನೆಯನ್ನ ಈ ಮೂಲಕ ದಾಖಲೆ ಮಾಡಿದ್ದಾರೆ.ದೇಶದ ಬಹುತೇಕ ರಾಜ್ಯಳಿಂದ ಆಗಮಿಸಿದ್ದ ನೂರಾರೂ ಸ್ಪರ್ಧಾಳುಗಳ ನಡುವೆಯೂ ಚೆನ್ನಣ್ಣನವರ ಅವರು ಮಾಡಿರುವ ಸಾಧನೆ ಕಡಿಮೆಯದ್ದಲ್ಲ.
ಪೊಲೀಸ್ ಇಲಾಖೆಯಲ್ಲಿದ್ದುಕೊಂಡೇ, ಇಂತಹ ಕ್ರೀಡೆಗಳಲ್ಲಿ ಸಾಧನೆ ಮಾಡಿರುವುದು ಅಮೋಘವಾಗಿದೆ.ಪೊಲೀಸ್ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ
ಅವರು ರಾಜ್ಯದ ಪೊಲೀಸ್ ಇಲಾಖೆಯ ಗೌರವವನ್ನ ಮತ್ತಷ್ಟು ಹೆಚ್ಚಿಸಿದ್ದು, ಅವರಿಗೆ ಮತ್ತಷ್ಟು ಒಳ್ಳೆಯದಾಗಲಿ ಎಂದು ಬಯಸುತ್ತ ಇನ್ನೂ ಹೆಚ್ಚೆಚ್ಚು ಪ್ರಶಸ್ತಿಗಳು ಲಭಿಸಲಿ ಒಳ್ಳೆಯದಾಗಿ ಇಲಾಖೆಯ ಗೌರವ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಲಿ.