ಕೋಲಾರ –
ಅಕ್ರಮವಾಗಿ ಆಸ್ತಿ ಪಾಸ್ತಿ ಸಂಪಾದನೆ ಆರೋಪದ ಮೇಲೆ ರಾಜ್ಯದ ಹಲವೆಡೆ ಬೆಳ್ಳಂ ಬೆಳಿಗ್ಗೆ ACB ಅಧಿಕಾರಿಗಳು ದಾಳಿ ಮಾಡಿದ್ದಾರೆ. ಭ್ರಷ್ಟ ಅಧಿಕಾರಿ ಗಳಿಗೆ ಮೈ ನಡಗುವ ಚಳಿಯಲ್ಲಿ ಚಳಿಯ ನಡುವೆ ಸೂರ್ಯ ಉದಯಿಸುವ ಮುನ್ನವೇ ದಾಳಿ ಮಾಡಿದ್ದಾರೆ. ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳ ಮೇಲೆ ದಾಳಿ ಮಾಡಲಾಗಿದೆ

ಇನ್ನೂ ಕೋಲಾರದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಮನೆಯ ಮೇಲೆ ದಾಳಿ ಮಾಡಲಾಗಿದೆ.ನಗರದಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ನಡೆದಿದೆ. ಕೋಲಾರ ಡಿಹೆಚ್ಓ ಡಾ.ವಿಜಯ್ ಕುಮಾರ್ ಅವರ ಮನೆ, ಕಚೇರಿ, ಮುಳಬಾಗಿಲಿನಲ್ಲಿರೋ ಮನೆ ಹಾಗೂ ಅವರ ಖಾಸಗಿ ಆಸ್ಪತ್ರೆ ಮೇಲೆ ಎಸಿಬಿ ಅಧಿಕಾರಿಗಳು ರೇಡ್ ಮಾಡಿದ್ದಾರೆ.

ಜೊತೆಗೆ ಚಿಂತಾಮಣಿಯಲ್ಲಿರುವ ಮನೆ ಹಾಗೂ ಬೆಂಗಳೂರಿನ ಫ್ಲಾಟ್ ಸೇರಿ ಒಟ್ಟು ಆರು ಕಡೆ ಏಕಕಾಲದಲ್ಲಿ ಎಸಿಬಿ ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.ಡಾ.ವಿಜಯ್ ಕುಮಾರ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪ ಕೇಳಿಬಂದ ಹಿನ್ನೆಲೆ ಎಸಿಬಿ ರೇಡ್ ನಡೆದಿದೆ ಎನ್ನಲಾಗಿದ್ದು ಪರಿಶೀಲನೆ ಮಾಡತಾ ಇದ್ದಾರೆ.