ಫಲಿತಾಂಶದಲ್ಲಿ ಉಲ್ಟಾ ಹೊಡೆದ ಪಶ್ಚಿಮ ಬಂಗಾಳ – ಸೋತ ಮಮತಾ – ಗೆದ್ದ ಸುವೇಂದು ಅಧಿಕಾರಿ – ಸೋಲನ್ನು ಒಪ್ಪಿಕೊಂಡ ಮಮತಾ ಬ್ಯಾನರ್ಜಿ

Suddi Sante Desk

ಪಶ್ಚಿಮ ಬಂಗಾಳ-

ಬಲಗೈಬಂಟನ ವಿರುದ್ದ ಸ್ಪರ್ಧೆ ಮಾಡಿ ಆರಂಭದಿಂ ದಲೂ ಎದುರಾಳಿಯ ವಿರುದ್ದ ಹಿನ್ನಡೆ ಸಾಧಿಸುತ್ತಾ ಬಂದಿದ್ದರೂ ಕೊನೆಯಲ್ಲಿ ಮಮತಾ ಬ್ಯಾನರ್ಜಿಯೇ ಗೆಲುವನ್ನು ಸಾಧಿಸಿದ್ದಾರೆ ಎಂಬ ಫಲಿತಾಂಶ ಈಗ ಮೇಘಾ ಟ್ವೀಸ್ಟ್ ಪಡೆದುಕೊಂಡಿದೆ. ಹೌದು ಇಂದು ಪಶ್ಚಿಮ ಬಂಗಾಲ ರಾಜ್ಯದ ನಂದಿಗ್ರಾಮದಲ್ಲಿನ ಇವತ್ತಿನ ಚುನಾವಣೆಯ ಫಲಿತಾಂಶದ ಚಿತ್ರಣ ಉಲ್ಟಾ ಪಲ್ಟಾವಾಗಿದೆ.ಆರಂಭದಲ್ಲಿ ಮತ್ತೆ ಮಮತಾ ಬ್ಯಾನರ್ಜಿ ಗೆಲವು ಸಾಧಿಸಿದ್ದರು ಎಂಬ ಸುದ್ದಿ ಹಬ್ಬಿ ತ್ತು.ಈ ಕುರಿತಂತೆ ಮಮತಾ ಬ್ಯಾನರ್ಜಿ ಕೂಡಾ ಹೇಳಿಕೊಂಡಿದ್ದರು.ಆದರೆ ಈ ಒಂದು ಸುದ್ದಿಯ ಬೆನ್ನಲ್ಲೇ ಈಗ ನಂದಿಗ್ರಾಮದ ಫಲಿತಾಂಶ ಉಲ್ಟಾ ಹೊಡೆದಿದೆ.

ಹೌದು ಪಶ್ಚಿಮ ಬಂಗಾಳ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸೋತಿದ್ದಾರೆ.ಸ್ಪರ್ಧಿಸಿದ್ದ ನಂದಿಗ್ರಾಮ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಮತ ಏಣಿಕೆಯಲ್ಲಿ ಮಮತಾಗೆ ಹಿನ್ನಡೆ ಆಗಿತ್ತು, ಆದರೆ ಅಂತಿಮ ಸುತ್ತಿನಲ್ಲಿ ಮಮತಾ ಬ್ಯಾನರ್ಜಿಗೆ ಗೆಲುವಾಗಿದೆ ಎಂಬ ಮಾತುಗಳು ಸುದ್ದಿ ಹರಡಿತ್ತು.ಇದನ್ನು ಮಾಧ್ಯ ಮಗಳು ಕೂಡಾ ಪ್ರಸಾರವನ್ನು ಮಾಡಿದ್ದವು.ಸುದ್ದಿ ಪ್ರಸಾರವಾದ ಬಳಿಕೆ ಕೆಲವೇ ಕ್ಷಣಗಳಲ್ಲಿ ನಂದಿಗ್ರಾ ಮದಲ್ಲಿನ ಫಲಿತಾಂಶ ಉಲ್ಟಾ ಆಗಿದೆ. ನಂದಿಗ್ರಾಮ ದ ವಿಧಾನಸಭಾ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಮಾಜಿ ಬಲಗೈ ಭಂಟ ಬಿಜೆಪಿಯ ಸುವೇಂದು ಅಧಿಕಾರಿ ಗೆಲುವು ಸಾಧಿಸಿದ್ದಾರೆ.

ಇಬ್ಬರ ನಡುವಿನ ಮಧ್ಯದ ತೀವ್ರ ಪೈಪೋಟಿಯ ನಡುವೆ ಈಗ ಮಮತಾ ಬ್ಯಾನರ್ಜಿ ಸೋಲನ್ನು ಒಪ್ಪಿಕೊಂಡಿದ್ದಾರೆ.ಇದನ್ನು ಚುನಾವಣಾ ಆಯೋಗ ಕೂಡಾ ಹೇಳಿದೆ. ಇಡೀ ರಾಷ್ಟ್ರದ ಚಿತ್ತ ನಂದಿಗ್ರಾಮ ಕ್ಷೇತ್ರದ ಮೇಲಿತ್ತು. ಆದರೆ ಈಗ ಫಲಿತಾಂಶ ಉಲ್ಟಾ ಆಗಿದೆ.ಎಲ್ಲವೂ ಸ್ಪಷ್ಟವಾಗಿದ್ದು ಮಮತಾ ಬ್ಯಾನರ್ಜಿ 1957 ಮತಗಳ ಅಂತರದಿಂದ ಸೋಲನ್ನು ಅನುಭ ವಿಸಿದ್ದಾರೆ.ಈ ಹಿಂದೆ ಮಮತಾ ಬ್ಯಾನರ್ಜಿ ಸರ್ಕಾರ ದಲ್ಲಿ ಸಚಿವರಾಗಿದ್ದ ಸುವೇಂದು ಅಧಿಕಾರಿ ಹಠಾತ್ತನೆ ಪಕ್ಷಕ್ಕೆ ಕೈಕೊಟ್ಟು ಬಿಜೆಪಿ ಸೇರಿದರು. ನನಗೆ ಬೆನ್ನಿಗೆ ಚೂರಿ ಹಾಕಿದವನನ್ನು ಅವನ ಕ್ಷೇತ್ರದಲ್ಲಿಯೇ ಸೋಲಿಸುತ್ತೇನೆ ಎಂಬ ಪಣತೊಟ್ಟು ಅಖಾಡಕ್ಕಿ ಳಿದಿದ್ದ ಮಮತಾ ಕೊನೆಗೂ ಅಲ್ಪ ಅಂತರದಲ್ಲಿ ಸೋತಿದ್ದಾರೆ.ತಾವು ನಂದಿ ಗ್ರಾಮದಿಂದಲೇ ಚುನಾ ವಣೆ ಸ್ಪರ್ಧಿಸುವುದಾಗಿ ಮಮತಾ ಘೋಷಿಸಿದರು. ಮಮತಾ ಅವರನ್ನು 50,000 ಮತಗಳ ಅಂತರ ದಿಂದ ಸೋಲಿಸುತ್ತೇನೆ ಎಂದು ತೊಡೆ ತಟ್ಟಿದ್ದ ಸುವೇಂದು ಅಧಿಕಾರಿ ಬಹಿರಂಗ ಸವಾಲು ಹಾಕಿದ್ದ ರು.ಕೊನೆಗೂ ಸೋಲಿಸಿದ್ದಾರೆ. ಅಮಿತ್ ಶಾ, ಜೆಪಿ ನಡ್ಡಾ, ಮೋದಿ ಇನ್ನೂ ಹಲವು ಬಿಜೆಪಿ ಅಗ್ರಪಂಥಿ ಯ ನಾಯಕರು ಮಮತಾ ವಿರುದ್ಧ ಶೋಗಳು ನಡೆ ಸಿದರು.ಇದರ ನಡುವೆ ಇತ್ತ ಕಾಲಿಗೆ ಪೆಟ್ಟು ಬಿದ್ದು ಅದರಲ್ಲಿಯೇ ತಿರುಗಾಡಿ ಚುನಾವಣೆಯನ್ನು ಮುಗಿ ಸಿದ ಮಮತಾ ಬ್ಯಾನರ್ಜಿ ಹಿಂದೆ ತಮ್ಮ ಬಲಗೈ ಬಂಟರಾಗಿದ್ದ ಸುವೇಂದು ವಿರುದ್ಧ ಸೋತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.