ಅಚ್ಚುಕಟ್ಟು ಕೋವಿಡ್ ನಿರ್ವಹಣೆ ಗೆ ಶಿಕ್ಷಕಿಗೆ ಒಲಿದು ಬಂತು ಗೆಲುವು – ಶೈಲಜಾ ಟೀಚರ್ ಗೆ ಮತ್ತೊಮ್ಮೆ ಗೆಲುವಿಗೆ ಮಾಲೆ ಹಾಕಿದ ಮತದಾರರು…..

Suddi Sante Desk

ತಿರುವನಂತಪುರಂ –

ಕೇರಳದಲ್ಲಿ ನಿವೃತ್ತ ಶಿಕ್ಷಕಿ ಯೊಬ್ಬರು ಮತ್ತೊಮ್ಮೆ ಐತಿಹಾಸಿಕ ಗೆಲುವಿನೊಂದಿಗೆ ಮತ್ತೊಮ್ಮೆ ವಿಜಯ ವನ್ನು ಸಾಧಿಸಿದ್ದಾರೆ ಜನರ ಸೇವೆಗೆ ಆಯ್ಕೆ ಆಗಿ ದ್ದಾರೆ‌. ಹೌದು ಕೋವಿಡ್ 19 ಸೋಂಕು ಕ್ಷಿಪ್ರ ವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿ ಎಲ್ಲರಿಂದ ಮೆಚ್ಚುಗೆ ಪಡೆದಿದ್ದ ಕೇರಳದ ಆರೋಗ್ಯ ಸಚಿವೆ ಶಿಕ್ಷಕಿ ಕೆಕೆ ಶೈಲಜಾ ಅವರು ಕಣ್ಣೂ ರು ಜಿಲ್ಲೆಯ ಮಟ್ಟಾನ್ನೂರ್ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಫ ರ್ಧಿಯನ್ನು 60 ಸಾವಿರಕ್ಕೂ ಹೆಚ್ಚು ಮತಗಳಿಂದ ಪರಾಜಯಗೊಳಿಸಿ ಗೆಲುವು ಸಾಧಿಸಿದ್ದಾರೆ. ಸಿಪಿಐ ಎಂನ ಭದ್ರಕೋಟೆಯಾದ ಮಟ್ಟಾನ್ನೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕೆಕೆ ಶೈಲಜಾ ಟೀಚರ್ ಅವರು ರೆವಲ್ಯೂ ಶನರಿ ಸೋಶಿಯಲಿಸ್ಟ್ ಪಕ್ಷದ ಇಲಿಕ್ಕಲ್ ಅಗಸ್ಥಿಯ ನ್ನು 61ಸಾವಿರ ಮತಗಳಿಂದ ಸೋಲಿಸಿದ್ದಾರೆ

ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಭಾರತೀಯ ಜನತಾ ಪಕ್ಷದ ಬಿಜು 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಕೆಕೆ ಶೈಲಜಾ ಅವರು ನಿವೃತ್ತ ಶಿಕ್ಷಕಿ‌ ಅವರು ಕೇರಳದ ಎಲ್ ಡಿಎಫ್ ಸರ್ಕಾರದಲ್ಲಿ ಕೋವಿಡ್ 19 ಸೋಂಕಿ ನ ಆರಂಭಿಕ ಹಂತದಲ್ಲಿ ಅದ್ಭುತ ಕೆಲಸ ಮಾಡುವ ಮೂಲಕ ಜನರ ಮನಗೆದ್ದಿದ್ದರು. ಕೇರಳದಲ್ಲಿ ಕೋವಿಡ್ ಸಂಬಂಧಿ ಸಾವಿನ ಸಂಖ್ಯೆಯೂ ಕಡಿಮೆ ಯಾಗಿತ್ತು.ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜ ಯನ್ ನೇತೃತ್ವದ ಎಲ್ ಡಿಎಫ್ ಮೈತ್ರಿಕೂಟ 75 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಯುಡಿಎಫ್ 41 ಸ್ಥಾನಗಳಲ್ಲಿ ಜಯ ಸಾಧಿಸಿದೆ.ಕೇರಳದಲ್ಲಿ ಎರಡನೇ ಬಾರಿ ಎಲ್ ಡಿಎಫ್ ಅಧಿಕಾರಕ್ಕೆ ಏರುತ್ತಿರುವುದು ರಾಜ್ಯದ ರಾಜಕೀಯದ ನಾಲ್ಕು ದಶಕಗಳ ಇತಿಹಾ ಸದಲ್ಲಿ ಹೊಸ ಮೈಲಿಗಲ್ಲಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.