ಧಾರವಾಡ –
ಧಾರವಾಡ ಸಂಸದರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಹುಟ್ಟು ಹಬ್ಬಕ್ಕಾಗಿ ಕ್ರಿಕೇಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಧಾರವಾಡದಲ್ಲಿ ದೊಡ್ಡ ಪ್ರಮಾಣದಲ್ಲಿ ಈ ಒಂದು ಕ್ರಿಕೇಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಧಾರವಾಡ ಗ್ರಾಮಾಂತರ.ಬಿಜೆಪಿ ಜಿಲ್ಲಾ ಯುವ ಮೋರ್ಚಾ ಘಟಕದಿಂದ ಈ ಒಂದು ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರ ಹುಟ್ಟು ಹಬ್ಬ ನವಂಬರ್ 27 ಕ್ಕೇ ಇದೆ. ಇನ್ನೂ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿಯವರ ಹುಟ್ಟು ಹಬ್ಬ ಈಗಾಗಲೇ ಮುಗಿದಿದೆ.ಇಬ್ಬರು ನಾಯಕರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಿರುವ ಬಿಜೆಪಿ ಯುವ ಮೋರ್ಚಾದ ಮುಖಂಡರು ಈಗ ಮತ್ತೊಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಶಂಕರ ಕೋಮಾರದೇಸಾಯಿ ನೇತ್ರತ್ವದಲ್ಲಿ ಈ ಒಂದು ಟೂರ್ನಾಮೆಂಟ್ ನ್ನು ಆಯೋಜನೆ ಮಾಡಲಾಗಿದೆ.ಇನ್ನೂ ಪಂದ್ಯಾವಳಿಯಲ್ಲಿ ಜಿಲ್ಲೆಯಿಂದ ಆಯ್ದ ಒಟ್ಟು 36 ತಂಡಗಳನ್ನು ಆಯ್ಕೆ ಮಾಡಿ 6 ಓವರ್ ಗಳ ಮ್ಯಾಚ್ ನ್ನು ಆಡಿಸಲಾಗುತ್ತಿದೆ. ಎಲ್ಲಾ ತಂಡಗಳಿಗೂ ದೇಶಕ್ಕಾಗಿ ಹೋರಾಡಿದ ಸ್ವಾಂತತ್ರ್ಯ ಸೇನಾನಿಗಳು ನಾಯಕರ ಗಣ್ಯರ ಹೆಸರುಗಳೊಂದಿಗೆ ಆಡಿಸಲಾಗುತ್ತಿದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮೈದಾನದಲ್ಲಿ ಈ ಕ್ರಿಕೇಟ್ ಪಂದ್ಯಾವಳಿಗಳು ನಡೆಯಲಿವೆ.
ನವಂಬರ್ 21 ರಿಂದ 25 ರವರೆಗೆ ಈ ಒಂದು ಪಂದ್ಯಾವಳಿಗಳು ನಡೆಯಲಿವೆ ಎಂದು ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಶಂಕರ ಕೋಮಾರದೇಸಾಯಿ ಸುದ್ದಿ ಸಂತೆ ವೇಬ್ ನ್ಯೂಸ್ ಗೆ ಹೇಳಿದ್ದಾರೆ. ಮುಖ್ಯವಾಗಿ ಪಂದ್ಯಾವಳಿಯಲ್ಲಿ ಪಾಲ್ಗೊಂಡ ತಂಡಗಳಿಗೆ ಐದು ದಿನಗಳ ಕಾಲ ಊಟ ಮತ್ತು ಉಪಹಾರದ ವ್ಯವಸ್ಥೆಯನ್ನು ಸಂಪೂರ್ಣವಾಗಿ ಉಚಿತವಾಗಿ ಮಾಡುತ್ತಿದೆ. ಹಾಗೇ ಆಡುವ ಪ್ರತಿಯೊಂದು ತಂಡದ ಸದಸ್ಯರಿಗೆ ಟೀ ಶರ್ಟ್ ನ್ನು ಕೂಡಾ ಕೊಡಲಾಗುತ್ತಿದೆ. ಹಾಗೇ ವಿಜೇತರಾದ ಮತ್ತು ಪಾಲ್ಗೊಂಡ ತಂಡಗಳಿಗೆ ಬಹುಮಾನದೊಂದಿಗೆ ನೆನಪಿನ ಕಾಣಿಗೆ ಹಾಗೇ ಪ್ರಶಸ್ತಿ ಪ್ರತ್ರಗಳನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ಶಂಕರ ಕೋಮಾರದೇಸಾಯಿ ಹೇಳಿದ್ರು. ಈನಡುವೆ ನಾಳೆ ಬೆಳಿಗ್ಗೆ ಹತ್ತು ಘಂಟೆಗೆ ಪಂದ್ಯಾವಳಿಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಶಾಸಕರಾದ ಅಮೃತ ದೇಸಾಯಿ ಬಿಜೆಪಿ ಮುಖಂಡ ಮಹೇಶ ಟೆಂಗಿನಕಾಯಿ ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯ.ಕ್ಷ ಬಸವರಾಜ ಕುಂದಗೋಳಮಠ ಬಿಜೆಪಿ ಶಹರ ಘಟಕ ಜಿಲ್ಲಾಧ್ಯಕ್ಷ ಕಿರಣ ಉಪ್ಪಾರ ಶಕ್ತಿ ಹಿರೇಮಠ ಸೇರಿದಂತೆ ಪ್ರಮುಖರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದು ಐದು ದಿನಗಳ ಕಾಲ ಕೃಷಿ ವಿವಿ ಮೈದಾನದಲ್ಲಿ ಕ್ರಿಕೇಟ್ ಪಂದ್ಯಾವಳಿ ನಡೆಯಲಿವೆ