ದಾವಣಗೆರೆ-
ದಾವಣಗೆರೆ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ.ಅಕ್ರಮವಾಗಿ ಸಾಗಿಸುತಿದ್ದ 1 ಕೋಟಿ 47 ಲಕ್ಷ ಹಣವನ್ನು ಸೀಜ್ ಮಾಡಿದ್ದಾರೆ.

ಕಲಬುರಗಿಯಿಂದ ದಾವಣಗೆರೆಗೆ ಕಾರಿನಲ್ಲಿ ಸಾಗಿಸುತಿದ್ದಾಗ ಹಣವನ್ನು ಸೀಜ್ ಮಾಡಲಾಗಿದೆ. ಭಾರಿ ಮೊತ್ತದ ಈ ಒಂದು ಹಣವನ್ನು ವಶಕ್ಕೆ ಪಡೆದಿದ್ದಾರೆ ದಾವಣಗೆರೆ ಪೊಲೀಸರು.

ದಾವಣಗೆರೆಯ ಕೆಆರ್ ರಸ್ತೆಯ ಶಾದಿ ಮಾಲ್ ಬಳಿ ಕಾರು ತಪಾಸಣೆ ವೇಳೆ ಈ ಒಂದು ಹಣ ಪತ್ತೆಯಾಗಿದೆ.

ಶ್ರೀಕಾಂತ, ಬೀರಲಿಂಗ, ಮಹೇಶ್ ಎಂಬುವರನ್ನು ಬಂಧನ ಮಾಡಲಾಗಿದೆ.ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು

ಸಿಕ್ಕ ಎಲ್ಲ ಹಣವು 500 ರೂಪಾಯಿ ನೋಟುಗಳಾಗಿವೆ.ಸಧ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಹಣದ ಮೂಲವನ್ನು ಪತ್ತೆ ಮಾಡತಾ ಇದ್ದಾರೆ.