ಬೆಂಗಳೂರು –
ಎಸಿಬಿ ಬಲೆಗೆ ಬಿದ್ದಿರುವ ಬಿಬಿಎಂಪಿ ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಅವರ ಮನೆಯಲ್ಲಿ ಬಿಬಿಎಂಪಿ ನಗರಯೋಜನೆ ವಿಭಾಗಕ್ಕೆ ಸೇರಿದ 430 ಕ್ಕೂ ಹೆಚ್ಚು ಕಡತಗಳು ಪತ್ತೆಯಾಗಿವೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿರುವ ಎಸಿಬಿ ಅಧಿಕಾರಿಗಳು ದೇವೇಂದ್ರಪ್ಪ ಅವರ ಮನೆಯನ್ನು ಶೋಧಿಸಿದಾಗ ವಿವಿಧ ಬ್ಯಾಂಕ್ ಅಕೌಂಟ್‍ಗಳು, ಬೆಲೆ ಬಾಳುವ ಕಾರುಗಳು ನಗದು ಹಣ, ಅಲ್ಲದೆ ಬಿಬಿಎಂಪಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿನ ಸೀಲು ಮತ್ತು ಕಚೇರಿಯ ಸೀಲು ಪತ್ತೆಯಾಗಿದೆ.

ದೇವೇಂದ್ರಪ್ಪ ಅವರ ಬಳಿ ದೊರೆತ ಬಿಬಿಎಂಪಿ ನಗರ ಯೋಜನೆ ವಿಭಾಗಕ್ಕೆ ಸೇರಿದ ಕಡತಗಳು ಮತ್ತು ಸೀಲುಗಳ ಬಗ್ಗೆ ವಿಚಾರಣೆ ಮುಂದುವರೆದಿದೆ.

ಕಳೆದ 5ರಂದು ಎಸಿಬಿ ದಾಳಿ ಸಂದರ್ಭದಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿತ್ತು. ಒಟ್ಟು 27 ಲಕ್ಷ 40 ಸಾವಿರ ರೂ.ಗಳನ್ನು ಮುಂದಿನ ತನಿಖೆ ಸಲುವಾಗಿ ಎಸಿಬಿ ದೇವೆಂದ್ರಪ್ಪ ಅವರನ್ನು ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆದುಕೊಂಡಿದೆ.ತನಿಖೆಯನ್ನು ಎಸಿಬಿ ಅಧಿಕಾರಿಗಳು ಮುಂದುವರೆಸಿದ್ದು ಇನ್ನೂ ಏನೇನು ಪತ್ತೆಯಾಗುತ್ತವೆ ಎಂಬುದನ್ನು ಕಾದು ನೋಡಬೇಕು.