ಬೆಂಗಳೂರು –
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಪಿಂಗ್ ಮೂಡಿನಲ್ಲಿದ್ದರು. ತಮ್ಮ ಬೆಂಗಾವಲು ಪಡೆಗೂ ಸಹ ತಿಳಿಸದೆ ಮಾಜಿ ಶಾಸಕ ಅಶೋಕ ಪಟ್ಟಣ ಅವರ ಜೊತೆಗೆ ಚಿಕ್ಕಪೇಟೆಯ ಖಾದಿ ಮಳಿಗೆಗೆ ತೆರಳಿದ ಸಿದ್ದರಾಮಯ್ಯ 60 ಖಾದಿ ಪಂಚೆ ಖರೀದಿಸಿದ್ದಾರೆ.
ಸಿದ್ದರಾಮಯ್ಯ ಅಂಗಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ ವಿವಿಧ ಪಂಚೆಗಳನ್ನು ತೋರಿಸಿದ್ದಾರೆ. ಸಣ್ಣ ಬಾರ್ಡರ್ ಖಾದಿ ಪಂಚೆ ಕೊಡುವಂತೆ ಸಿದ್ದರಾಮಯ್ಯನವರು ಹೇಳಿದ್ದು, ಒಟ್ಟು 25 ಸಾವಿರ ರೂ. ಮೌಲ್ಯದ 60 ಖಾದಿ ಪಂಚೆಗಳನ್ನು ಅವರು ಖರೀದಿಸಿದ್ದಾರೆ. ಸದಾಕಾಲ ಪಂಚೆಯಲ್ಲೇ ಕಂಗೊಳಿಸುವ ಸಿದ್ದರಾಮಯ್ಯನವರು ಇದೀಗ 60 ಖಾದಿ ಪಂಚೆಗಳನ್ನು ಖರೀದಿಸಿದ್ದಾರೆ.