ಧಾರವಾಡ –
ಆಟೋ ತೊಳೆಯಲು ಹೋಗಿ ಕೆರೆಯಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿಯೊರ್ವ ಸಾವಿಗೀಡಾದ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಕೆಲಗೇರಿ ಕೆರೆಯಲ್ಲಿ ಈ ಒಂದು ಘಟನೆ ನಡೆದಿದೆ. ಲಕ್ಷ್ಮಣ ಡೊಳ್ಳನ್ನವರ ಆಟೋ ತೊಳೆಯಲು ಕೆಲಗೇರಿ ಕೆರೆಗೆ ಹೋಗಿದ್ದಾರೆ.ನಗರದ ಆನಂದನಗರದ ನಿವಾಸಿಯಾಗಿದ್ದಾರೆ.ಇಂದು ಆಟೋವನ್ನು ತೊಳೆಯಲು ಕೆರೆಯ ದಂಡೆಯ ಮೇಲೆ ನಿಲ್ಲಿಸಿದ್ದಾರೆ.

ತೊಳೆಯಲು ಮುಂದಾದಾಗ ಕಾಲು ಜಾರಿ ಕೆರೆಯಲ್ಲಿ ಬಿದ್ದು ಸಾವಿಗೀಡಾಗಿದ್ದು ವಿಷಯ ತಿಳಿದ ಉಪನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ಲಕ್ಷ್ಮಣ ಶವವನ್ನು ಹೊರಗೆ ತಗೆದರು.ಪ್ರಕರಣ ದಾಖಲು ಮಾಡಿಕೊಂಡು ಹೆಚ್ಚಿನ ತನಿಖೆಯನ್ನು ಉಪನಗರ ಪೊಲೀಸರು ಮಾಡತಾ ಇದ್ದಾರೆ ಪೊಲೀಸರು






















