ಮೈಸೂರು –
ಬಳಿ ಕಂದು ಮೀನು ಗೂಬೆಯನ್ನು ಮಾರಾಟ ಮಾರುತ್ತಿದ್ದ ಮೂವರ ಬಂಧಿಸುವ ಘಟನೆ ಮೈಸೂರಿನಲ್ಲಿ ನಡೆದಿದೆ.ಅರಣ್ಯ ಸಂಚಾರಿ ದಳ ಸಿಬ್ಬಂದಿ ಕಾರ್ಯಾಚರಣೆ ಮಾಡಿ ಈ ಒಂದು ಜಾಲವನ್ನು ಭೇದಿಸಿದ್ದಾರೆ.ಶ್ರೀರಂಗಪಟ್ಟಣದ ಬಳಿ ಕಂದು ಮೀನು ಗೂಬೆ ಮಾರುತ್ತಿದ್ದರು ಮೂವರು.
ಮಂಡ್ಯ ಮೂಲದ ಕುಮಾರ್, ಮೊಹಮ್ಮದ್ ರಫಿ, ರಾಜೇಶ್ ಬಂಧಿತ ಆರೋಪಿಗಳಾಗಿದ್ದಾರೆ.ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ.ಅರಣ್ಯ ಸಂಚಾರಿ ದಳದ ಡಿಸಿಎಫ್ ಎ.ಟಿ ಪೂವಯ್ಯ ಮಾರ್ಗದರ್ಶನದಲ್ಲಿ ಆರ್ ಎಫ್ ಓ ವಿವೇಕ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ.
ಇನ್ನೂ ಬಂಧಿತರಿಂದ ಕಂದು ಮೀನುಬಣ್ಣದ ಗೂಬೆ, ಬೈಕ್, ಮೊಬೈಲ್ ಗಳು ವಶಕ್ಕೆ ತೆಗೆದುಕೊಂಡು ತನಿಖೆ ಮಾಡ್ತಾ ಇದ್ದಾರೆ.