ಕಾರು, ಬೈಕ್, ಕಳ್ಳನ ಬಂಧನ ಧಾರವಾಡದ ಶಹರ ನಗರ ಪೊಲೀಸರ ಕಾರ್ಯಾಚರಣೆ

Suddi Sante Desk

ಧಾರವಾಡ –

ಧಾರವಾಡದ ಶಹರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ.ಹೌದು ಕಳೆದ ಹಲವು ದಿನಗಳಿಂದ ಶಹರ ಠಾಣೆಯ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಬೈಕ್ ಮತ್ತು ಕಾರು ಕಳ್ಳತನ ಪ್ರಕರಣ ಕುರಿತಂತೆ ಕಾರ್ಯಾಚರಣೆ ಆರಂಭ ಮಾಡಿದ ಪೊಲೀಸರು ಒರ್ವ ಕಳ್ಳನನ್ನು ಬಂಧನ ಮಾಡಿ ಅವನಿಂದ ಸಾಕಷ್ಟು ಪ್ರಮಾಣದಲ್ಲಿ ಬೈಕ್ ಹಾಗೇ ಒಂದು ಕಾರನ್ನು ವಶ ಪಡಿಸಿಕೊಳ್ಳಲಾಗಿದೆ.

ಮುಜಮ್ಮೀಲ್ ರಿಯಾದಖಾಜಿ ಎಂಬುವನನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಮುಂದು ವರೆಸಿದ್ದಾರೆ.ಬಂಧಿತ ಆರೋಪಿ ಹುಬ್ಬಳ್ಳಿಯ ಆನಂದನಗರದ ಹಳೇ ಹುಬ್ಬಳ್ಳಿಯ ನಿವಾಸಿಯಾಗಿ ದ್ದಾನೆ. ಇನ್ನೂ ಬಂಧಿತನಿಂದ ವಿವಿಧ ಕಂಪನಿಗಳ 7 ಮೊಟಾರ ಬೈಕ್ ಗಳನ್ನು ಹಾಗೇ ಒಂದು ಚಾವರ್ಲೇ ಟ್ ಕಂಪನಿಯ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೇ 7 ಮೊಬೈಲ್ ಗಳನ್ನು ವಶಪಡಿಸಿಕೊಂಡಿ ದ್ದಾರೆ ಪೊಲೀಸರು.

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನ ದಲ್ಲಿ ಧಾರವಾಡ ಉಪವಿಭಾಗದ ಎಸಿಪಿ ಶ್ರೀಮತಿ ಜಿ ಅನುಷಾ ಮತ್ತು ಶಹರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಗಮೇಶ ದಿಡಿಗನಾಳ ಇವರ ನೇತ್ರತ್ವ ದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒರ್ವ ಖತರ್ನಾಕ್ ಕಳ್ಳನನ್ನು ಬಂಧನ ಮಾಡಲಾಗಿದೆ. ಇವರೊಂದಿಗೆ ಈ ಒಂದು ಕಾರ್ಯಾಚರಣೆಯಲ್ಲಿ ಪಿಎಸ್ಐ ಶ್ರೀಮತಿ ಎಲ್ ಕೆ ಕೊಡಬಾಳ, ಹಾಗೇ ಸಿಬ್ಬಂದಿಗಳಾದ ಪಿ ಬಿ ಕಾಳೆ, ಜಿ ಜಿ ಚಿಕ್ಕಮಠ,ಕೆ ಎ ಕೊಪ್ಪಳ,ವಿ ಪಿ ಕಿಲ್ಲೇದಾರ,ಆರ್ ಎಸ್ ಕಿರಿಜಂತನ ವರ,ದಡೇದ,ವಿ ಎಸ್ ಕುದರಿ. ಡಿ ವಾಯ್ ಮನ್ನಿಕೇರಿ,ಮಂಜುನಾಥ ಬಾರಕೇರ, ಬಸವರಾಜ ಕಡಕೋಳ.ಸೇರಿದಂತೆ ಹಲವರು ಪಾಲ್ಗೊಂಡಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.