ಕೆರೂರ –
ನರೇಗಾ ಯೋಜನೆಯಲ್ಲಿ ಅಕ್ರಮ ಆರೋಪ ಎದುರಿಸುತ್ತಿರುವ ಕಟಗೇರಿ ಪಿಡಿಒ ಆರತಿ ಕ್ಷತ್ರಿಯ ಮಾಜಿ ಸಿಎಂ, ಮಾಜಿ ಶಾಸಕ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿದರು.

ಜಿಪಂ ಹಿಂದಿನ ಸಿಇಒ ಗಂಗೂಬಾಯಿ ಮಾನಕರ ಮತ್ತು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅವರು PDO ಆರತಿ ವಿರುದ್ಧ ಶಿಸ್ತಿನ ಕ್ರಮಕ್ಕೆ ಮುಂದಾಗಿದ್ದರು. ಗುರುವಾರದ ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಾಲಿಗೆ ಏಕಾಏಕಿ, ಎರಗುವ ಮೂಲಕ ಪಿಡಿಒ ಆರತಿ ಬೀಸುವ ದೊಣ್ಣೆಯಿಂದ ಪಾರಾಗಲು ಯತ್ನಿಸಿದರೆ ಎಂಬ ಚರ್ಚೆಗಳು ನೆರೆದ ಜನಪ್ರತಿನಿಧಿಗಳಿಂದ ಕೇಳಿ ಬಂದವು.
ಈಚೆಗೆ ಗುಳೇದಗುಡ್ಡ, ಬಾದಾಮಿ ತಾಪಂ ಸಭೆಯಲ್ಲಿ ಪಿಡಿಒ ಆರತಿ ವಿರುದ್ಧ ಹಲವು ಜನಪ್ರತಿನಿಧಿಗಳು ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿದ್ದರು.ಇವೆಲ್ಲದರ ನಡುವೆ ಈಗ ಈ ಮಹಿಳಾ PDO ಅಧಿಕಾರಿ ಮಾಜಿ ಮುಖ್ಯಮಂತ್ರಿ ಕಾಲಿಗೆ ಬಿದ್ದಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಮಾತುಗಳು ಕೇಳಿ ಬರುತ್ತಿವೆ.

ಏನೇ ಆಗಲಿ ತಾವೊಬ್ಬರು ಸರ್ಕಾರಿ ಅಧಿಕಾರಿ ಎಂದುಕೊಂಡು ಗಮನದಲ್ಲಿಟ್ಟುಕೊಂಡು ನಡೆದುಕೊಳ್ಳದ ಮಹಿಳಾ PDO ವಿರುದ್ಧ ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ.