ಚಿತ್ರದುರ್ಗ –
ಕುಣಿಗಲ್, ಚಿತ್ರದುರ್ಗ ಯೋಗವನ ಬೆಟ್ಟದ ಪೀಠಾಧ್ಯಕ್ಷ ಸ್ಥಾನ ತಪ್ಪಿದ ಹಿನ್ನೆಲೆ ಬೇಸರಗೊಂಡ ಶರಣರ ಸುಜ್ಞಾನ ಮಂಟಪದ ತಿಪ್ಪೇರುದ್ರಸ್ವಾಮಿ, ಸಚಿವ ಶ್ರೀರಾಮಲು ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗದ ಬಿಜೆಪಿ ಕಚೇರಿ ಬಳಿ ನಡೆದಿದೆ.

ಹಣಬಲ, ಅಧಿಕಾರ ಬಲದಿಂದ ಪೀಠಾಧಿಕಾರ ತಪ್ಪಿಸಿದ ಆರೋಪ ಮಾಡಿರುವ ತಿಪ್ಪೇರುದ್ರ ಸ್ವಾಮೀಜಿ,ಚಿತ್ರದುರ್ಗದ ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಯೋಗವನ ಬೆಟ್ಟದ ಬಸವ ಕುಮಾರ ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಸ್ವಾಮೀಜಿಯನ್ನು ಸಚಿವ ಶ್ರೀರಾಮಲು ತಡೆದು ಅಪಾಯದಿಂದ ಪಾರು ಮಾಡಿದ್ದಾರೆ. ಸದ್ಯ ಅವರು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
