ಯಶಶ್ವಿಯಾಗಿ ನಡೆಯಿತು ಶಿವಸಂಗಮ ಚಿಟ್ಸ್(ಪ್ರೈ) 13ನೇ ವಾರ್ಷಿಕೋತ್ಸವ ಸಮಾರಂಭ – ರಕ್ತದಾನ ಶಿಬಿರ,ಗ್ರಾಹಕರ ಸಮಾರಂಭ…..

Suddi Sante Desk

ಧಾರವಾಡ –

ಧಾರವಾಡದ ಹೆಸರಾಂತ ಚಿಟ್ಸ್ ಪ್ರೈ ಲಿಮಿಟೆಡ್ ಸಂಸ್ಥೆಗಳಲ್ಲಿ ಶಿವಸಂಗಮ ಚಿಟ್ಸ್ ಸಂಸ್ಥೆ ಕೂಡಾ ಒಂದಾಗಿದೆ. ಈ ಒಂದು ಸಂಸ್ಥೆ ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ನೀಡುತ್ತಾ ಬಂದಿದ್ದು ಸಧ್ಯ ಈ ಒಂದು ಮಹಾನ್ ಸಂಸ್ಥೆಗೆ 13 ರ ಸಂಭ್ರಮ.ಈ ಒಂದು ಹಿನ್ನಲೆಯಲ್ಲಿ ಧಾರವಾಡದಲ್ಲಿ ಸಂಸ್ಥೆಯ ವತಿಯಿಂದ ವಿಶೇಷವಾದ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.ಸಂಸ್ಥೆಯ ವಾರ್ಷಿಕೋ ತ್ಸವದ ಸಂಭ್ರಮದ ಹಿನ್ನಲೆಯಲ್ಲಿ ರಕ್ತದಾನ ಮತ್ತು ಗ್ರಾಹಕರ ಅಭಿನಂದನಾ ಸಮಾರಂಭವನ್ನು ನಗರದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಜಿ ಚಾಲನೆ ನೀಡಿದರು. ಇನ್ನೂ ಇದೇ ವೇಳೆ 88 ಜನರು ಉತ್ಸಾಹದಿಂದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನವನ್ನು ಮಾಡಿದರು. ಇನ್ನೂ ಸಂಸ್ಥೆಯೊಂದಿಗೆ ಉತ್ತಮ ವಾಗಿ ಹೂಡಿಕೆ ಮಾಡಿ ವ್ಯವಹಾರ ಮಾಡಿದ ಹಿನ್ನಲೆ ಯಲ್ಲಿ ಗ್ರಾಹಕರಿಗೆ ಅಭಿನಂದನೆಗಳನ್ನು ಸಲ್ಲಿಸಲಾ ಯಿತು.

ಇದೇ ವೇಳೆ ಸಾಮಾಜಿಕ ಕಾರ್ಯದೊಂದಿಗೆ ಕೆಲಗೇರಿ ಕೆರೆಯನ್ನು ಸ್ವಚ್ಚಗೊಳಿಸಿದ ಮಂಜುನಾಥ ಹಿರೇಮಠ ಬಸವರಾಜ ಕೊರವರ ಮತ್ತು ಟೀಮ್ ನವರಿಗೆ ಸಂಸ್ಥೆಯ ವತಿಯಿಂದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಇನ್ನೂ 13ನೇ ವಿಶೇಷವಾದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಗದಗ ಶಿವಾನಂದ ಬ್ರಹನ್ಮಠದ ಜಗದ್ಗುರು ಸದಾಶಿ ವಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿದ್ದರು.ಮುಖ್ಯ ಅತಿಥಿಯಾಗಿ ಡಾ ಕಿರಣ ಸಾಣಿಕೊಪ್ಪ,ಡಾ ವಸಂತ ಮಣಗುತ್ತಿ,ಡಾ ಶಶಿಕು ಮಾರ ಎಸ್,ಡಾ ಉಮೇಶ ಹಳ್ಳಿಕೇರಿ,ಶ್ರೀಕಾಂತ ಆಪ್ತೆ, ಇವರೊಂದಿಗೆ ಸಂಸ್ಥೆಯ ಮುಖ್ಯಸ್ಥರಾದ ಪ್ರಶಾಂತ ದೇಸಾಯಿಮಠ,ಎಮ್ ಬಿ ಲಿಂಗದಾಳ, ಮಹೇಶ ಗಾಣಿಗೇರ,ರವಿ ಹಳ್ಳಿಕೇರಿ,ಪ್ರವೀಣ ಕುಮಾರ ಬಾವಿ,ಸೇರಿದಂತೆ ಸಿಬ್ಬಂದಿ ವರ್ಗದವರು ಸಂಸ್ಥೆಯ ಹಿತೈಸಿಗಳು ಆಪ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಶ್ವಿಗೊಳಿಸಿ ಸಾಧನೆಗೆ ಪ್ರೇರಣೆಯಾದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.