ನಾಡಿನ ಶಿಕ್ಷಕರಿಗೆ ಅನುಕೂಲ ಮಾಡಿಕೊಡುವ ದಿಸೆಯಲ್ಲಿ ಗ್ರಾಮೀಣ ಶಿಕ್ಷಕರ ಸಂಘ ಮಾಡಿಕೊಂಡ ಮನವಿ ಏನು…..

Suddi Sante Desk

ಹುಬ್ಬಳ್ಳಿ –


ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು.ಶಿಕ್ಷಕರಿಗೆ ಪರ್ಯಾಯ ಶೈಕ್ಷಣಿಕ ಚಟುವಟಿಕೆಗಳನ್ನು ಕೈಗೊ ಳ್ಳಲು ಶಿಕ್ಷಕರ ಅನುದಾನದ ರೂಪದಲ್ಲಿ ನೀಡಲಾ ಗುವ ಸಾದಿಲ್ವಾರು ಅನುದಾನವನ್ನು ತುರ್ತಾಗಿ ಬಿಡುಗಡೆಗೊಳಿಸುವಂತೆ ಗ್ರಾಮೀಣ ಶಿಕ್ಷಕರ ಸಂಘ ಒತ್ತಾಯವನ್ನು ಮಾಡಿದೆ

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ಹುಬ್ಬಳ್ಳಿ ವತಿಯಿಂದ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ covid 19 ಸಾಂಕ್ರಾಮಿಕ ರೋಗದ ಪ್ರಸರಣ ಹಿನ್ನಲೆಯಲ್ಲಿ ಶಾಲೆಗಳಿಗೆ ರಜೆ ನೀಡಿರುವುದು ಹಾಗೂ ಇದರಿಂದ ಸಾಕಷ್ಟು ಮಕ್ಕಳ ಕಲಿಕಾ ನಿರಂತರತೆ ಕುಂಠಿತ ಗೊಂಡಿರುವ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಮಕ್ಕಳ ಶಿಕ್ಷಣದ ನಿರಂತರತೆಗಾಗಿ ಶ್ರಮಿಸುತ್ತಿರುವುದು ತಮಗೆ ತಿಳಿದ ವಿಷಯವೇ ಆಗಿದೆ

ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಸಾರ್ವ ಜನಿಕ ಶಿಕ್ಷಣ ಇಲಾಖೆಯು ಮಕ್ಕಳ ಶಿಕ್ಷಣದ ನಿರಂತರವಾಗಿ ಜರುಗಲಿ ಎಂಬ ಉದ್ದೇಶದಿಂದ ಸ್ಮಾರ್ಟ್ಫೋನ್ ಹೊಂದಿರುವ ಮಕ್ಕಳು, ಕೀಪ್ಯಾಡ್ ಫೋನ್ ಹೊಂದಿರುವ ಮಕ್ಕಳು, ದೂರದರ್ಶನ ಅಥವಾ ರೇಡಿಯೋ ಹೊಂದಿರುವ ಮಕ್ಕಳು, ಯಾವುದೇ ತಂತ್ರಜ್ಞಾನದ ಸಾಧನ ಹೊಂದದೆ ಇರುವ ಮಕ್ಕಳನ್ನು ಪ್ರತ್ಯೇಕವಾಗಿ ಗುರ್ತಿಸಿ ಅವರ ಕಲಿಕೆಗಾಗಿ ಪರ್ಯಾಯ ಶೈಕ್ಷಣಿಕ ಚಟುವಟಿಕೆ ಗಳನ್ನು ರೂಪಿಸಿದ್ದು ಇರುತ್ತದೆ ಯಾವುದೇ ತಂತ್ರ ಜ್ಞಾನದ ಸಾಧನ ಹೊಂದದೆ ಇರುವ ಮಕ್ಕಳ ಚಟುವಟಿಕೆಗಳಿಗಾಗಿ ಅಭ್ಯಾಸದ ಹಾಳೆಗಳನ್ನು ರೂಪಿಸಿದೆ

ಅಭ್ಯಾಸದ ಹಾಳೆಗಳನ್ನು ಜೆರಾಕ್ಸ್ ಮಾಡಿಸಿ ತಲುಪಿಸಲು ಸೂಕ್ತ ಅನುದಾನದ ಕೊರತೆಯಿದ್ದು ಪ್ರತಿ ತರಗತಿಗೆ 5000 ಗಳಷ್ಟು ಹಣ ಖರ್ಚಾಗುತ್ತಿದೆ ತಾವುಗಳು ಪ್ರತಿವರ್ಷ ಶಿಕ್ಷಕರ ಕಲಿಕೋಪಕರಣ ತಯಾರಿಕೆಗಾಗಿ ನೀಡುತ್ತಿದ್ದ ಸಾದಿಲ್ವಾರು ಅನುದಾನ ವನ್ನು ಅತಿ ತುರ್ತಾಗಿ ಸಾಧ್ಯವಾದಷ್ಟು ಗರಿಷ್ಠ ಮಿತಿಯಲ್ಲಿ ಒದಗಿಸಿದಲ್ಲಿ ಶಿಕ್ಷಕರಿಗೆ ಹಾಗೂ ಮಕ್ಕಳಿ ಗೆ ತುಂಬಾ ಸಹಕಾರಿಯಾಗಲಿದೆ ಕಾರಣ ದಯಾಳು ಗಳಾದ ತಾವು ರಾಜ್ಯದ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಆದಷ್ಟು ಬೇಗನೆ ಶಿಕ್ಷಕರಿಗೆ ಬಿಡುಗಡೆಗೊಳಿಸುವಂತೆ ಸೂಚಿಸಲು ತಮ್ಮಲ್ಲಿ ನಮ್ಮ ಸಂಘವು ವಿನಂತಿಸಿಕೊಳ್ಳುತ್ತದೆ

ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ತಂತ್ರಜ್ಞಾನದ ಸಾಧನ ಹೊಂದದೆ ಇರುವ ಮಕ್ಕಳ ಸಂಖ್ಯೆಯೇ ಹೆಚ್ಚಿದ್ದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಕೈಗೊಳ್ಳಲು ಅಭ್ಯಾಸದ ಹಾಳೆಗಳನ್ನು ಬೆಳೆಸುವುದು ಅನಿವಾರ್ಯವಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.