ಬೆಂಗಳೂರು –
ಸಾಕಷ್ಟು ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ನಡುವೆಯೂ ರೌಡಿಯನ್ನು ಬೆನ್ನತ್ತಿ ಪೈರಿಂಗ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿಲಿಕಾನ್ ಸಿಟಿಯಲ್ಲಿ ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್ ನಡೆದಿರುವ ಘಟನೆ ವರದಿಯಾಗಿದೆ.
ಕಾಲಿಗೆ ಗುಂಡಿಕ್ಕಿ ರೌಡಿಶೀಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ರೌಡಿಶೀಟರ್ ಮದನ್ ಕಾಲಿಗೆ ಖಾಕಿ ಪಡೆ ಗುಂಡು ಹೊಡೆದಿದೆ. ಮದನ್ನನ್ನು ಬರೋಬ್ಬರಿ 4 ಕಿಲೋ ಮೀಟರ್ ಚೇಸ್ ಮಾಡಿದ ಪೊಲೀಸರು ರೌಡಿ ಶೀಟರ್ ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದಾರೆ. ಬೇಗೂರಿನಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಮದನ್ ನನ್ನು ಪೊಲೀಸರು ಚೇಸ್ ಮಾಡಿದ್ದಾರೆ.
ಕೊಲೆ, ಸುಲಿಗೆ ಸೇರಿ 14ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಮದನ್ನನ್ನು ಪೊಲೀಸರು ಅರೆಸ್ಟ್ ಮಾಡಲು ಮುಂದಾಗಿದ್ದರು. ರೌಡಿ ಶೀಟರ್ ನನ್ನು ಬಂಧಿಸುವಾಗ ಕಾನ್ಸ್‌ಟೇಬಲ್ ರವಿಕುಮಾರ್ ಮೇಲೆ ಮದನ್ ಹಲ್ಲೆಗೈದು ಪರಾರಿಯಾಗಿದ್ದ.ಈ ವೇಳೆ, ಆರೋಪಿಯನ್ನು ಚೇಸ್ ಮಾಡಿದ ಬೇಗೂರು ಠಾಣೆ PSI ಈಶ್ವರ್ ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿದ್ದಾರೆ. ಕಾಲಿಗೆ ಗುಂಡಿಕ್ಕಿ ರೌಡಿ ಶೀಟರ್ ಮದನ್‌ನನ್ನ ಬಂಧಿಸಿದ್ದಾರೆ. ಸದ್ಯ, ಗಾಯಾಳು ರೌಡಿ ಶಿಟರ್ ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.