ಧಾರವಾಡದ ಸರ್ಕಾರಿ ಕಾಲೇಜ್ ನಲ್ಲಿ ವಿದ್ಯಾರ್ಥಿಗಳಿಗೆ ಪ್ರಾಚಾರ್ಯ ಹೀಗೆ ಮಾತಾಡೊದಾ – ಅಶ್ವೀಲ ಮಾತುಗಳಿಂದ ಸಿಡಿದೆದ್ದ ವಿದ್ಯಾರ್ಥಿ ಗಳು…..

Suddi Sante Desk

ಧಾರವಾಡ –

ಧಾರವಾಡದ ಸರ್ಕಾರಿ ಕಾಲೇಜ್ ನಲ್ಲಿ ಪ್ರಾಚಾ ರ್ಯರ ವಿರುದ್ದ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ ಹೌದು ಕಾಲೇಜ ವಿದ್ಯಾರ್ಥಿಗಳ ಬಗ್ಗೆ ಕಾಲೇಜ್ ಪ್ರಾಚಾರ್ಯನಿಂದ ಅಶ್ಲೀಲ ಪದ ಪ್ರಯೋಗ ಬಳಕೆ ಮಾಡಿದ್ದು ಕೇಳಿ ಬಂದಿದೆ.ಪ್ರಾಚಾರ್ಯನ ಅಶ್ಲೀಲ ಮಾತುಗಳ ವಿಡಿಯೋ ವೈರಲ್ ಆಗುತ್ತಿದ್ದಂತೆ ಈಗ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ.ಎಸ್.ಬಿ.ಪಾಟೀಲ, ಅಶ್ಲೀಲ ಪದ ಪ್ರಯೋಗಿಸಿದ್ದಾರೆ ಪ್ರಾಚಾರ್ಯರು.

ಹೀಗಾಗಿ ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜ್‌ನ ಪ್ರಾಚಾರ್ಯರ ವಿರುದ್ದ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ.ಧಾರವಾಡದ ಹೊಸ್ ಬಸ್ ನಿಲ್ದಾಣ ಬಳಿ ಇರೋ ಈ ಒಂದು ಕಾಲೇಜ್ ನಲ್ಲಿ ಈ ಒಂದು ಘಟನೆ ನಡಿದಿದೆ.

ಕಾಲೇಜ್ ಕೊನೆಯ ದಿನದ ಸಂಭ್ರಮದಲ್ಲಿದ್ದ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಸೇರಿ ಸಂಭ್ರಮಿಸು ವಾಗ ಬಣ್ಣ ಎರಚಾಡಿ, ಪರಸ್ಪರ ಆಟೋಗ್ರಾಫ್ ಪಡೆದುಕೊಳ್ಳುತ್ತಾ ಸಂಭ್ರಮಿಸುತ್ತಿದ್ದರು.ಇದನ್ನು ನೋಡುತ್ತ ಅಶ್ಲೀಲ ಪದ ಪ್ರಯೋಗಿಸಿದ ಪ್ರಾಚಾ ರ್ಯರು ಮಾತನಾಡಿದ್ದಾರೆ.

ಈ ವೇಳೆ ವಿದ್ಯಾರ್ಥಿಗಳ ವಿಡಿಯೋ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿ ಆ ವಿಡಿಯೋದಲ್ಲಿ ರಿಕಾರ್ಡ್ ಆಗಿದೆ ಪ್ರಾಚಾರ್ಯರ ಅಶ್ಲೀಲ ಮಾತುಗಳು.ಮತ್ತೋರ್ವ ಶಿಕ್ಷಕಿಯ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ ಪ್ರಾಚಾರ್ಯರು.ಹೀಗಾಗಿ ತುಂಬಾ ಕೆಟ್ಟದಾಗಿ ಮಾತ ನಾಡಿದ ವಿಡಿಯೋ ವೊಂದು ವೈರಲ್ ಆಗುತ್ತಿದ್ದಂತೆ ವಿದ್ಯಾರ್ಥಿಗಳು ಪ್ರಾಚಾರ್ಯಾರ ವಿರುದ್ದ ಸಿಡಿದೆದ್ದಿ ದ್ದಾರೆ

ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಹೋರಾಟವನ್ನು ಮಾಡುತ್ತಿದ್ದು ಪ್ರತಿಭಟನೆ ಮಾಡಿದರು. ಇನ್ನೂ ಸುದ್ದಿ ತಿಳಿದ ಉಪನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಭರವಸೆಯನ್ನು ನೀಡಿದ್ದಾರೆ.

ಹೀಗಾಗಿ ಸಧ್ಯ ಪ್ರತಿಭ ಟನೆಯ ಕಾವು ಶಾಂತವಾ ಗಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು ಇನ್ನೂ ಪ್ರಮುಖ ವಾಗಿ ಒಂದು ಜವಾಬ್ದಾರಿಯುತವಾದ ಸ್ಥಾನದಲ್ಲಿ ದ್ದುಕೊಂಡು ಪ್ರಾಚಾರ್ಯರು ವಿದ್ಯಾರ್ಥಿಗಳ ಬಗ್ಗೆ ಹೀಗೆ ಮಾತಾ ನಾಡಿದ್ದು ದುರಂತವೇ ಸರಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.