ಮೈಸೂರು –
ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಐಎಎಸ್ ಅಧಿಕಾರಿ ಶಿಲ್ಪಾನಾಗ್ ನೇಮಕ ವಾಗಿದ್ದು ಅಧಿಕಾರ ವಹಿಸಿಕೊಂಡರು.ಇ-ಆಡಳಿತದ ನಿರ್ದೇಶಕರಾಗಿದ್ದ ಶಿಲ್ಪಾನಾಗ್ ಅವರಿಗೆ ಸರ್ಕಾರ ಪಾಲಿಕೆ ಆಯುಕ್ತರಾಗಿ ಹೆಚ್ಚುವರಿ ಕಾರ್ಯಭಾರ ನೀಡಿ ಆದೇಶ ಹೊರಡಿಸಿದೆ.

ರಾಜ್ಯ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದರು. 2018 ರಿಂದ 2019 ಫೆಬ್ರವರಿ ತಿಂಗಳವರೆಗೆ ನಗರಪಾಲಿಕೆ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದರು.

ಹಾಲಿ ಆಯುಕ್ತರಾಗಿದ್ದ ಗುರುದತ್ ಹೆಗಡೆ ಅವರನ್ನು ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ಮಂಡಳಿ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದರಿಂದ ಸ್ಥಾನ ತೆರವಾಗಿತ್ತು.ಹೀಗಾಗಿ ವರ್ಗಾವಣೆಗೊಂಡ ಇವರು ಅಧಿಕಾರ ವಹಿಸಿಕೊಂಡರು.