ಹೈದರಾಬಾದ್ –
ಹೌದು ಜೀವಮಾನವಿಡೀ ಕಷ್ಟಪಟ್ಟು ದುಡಿದ ಹಣವನ್ನು ಬ್ಯಾಂಕ್ ಗಳಲ್ಲಿ ಇಡುವ ಬದಲು ಮನೆಯಲ್ಲಿಯೇ ಪೆಟ್ಟಿಗೆ ಒಂದರಲ್ಲಿ ಇಟ್ಟು ಗೆದ್ದಲಿಗೆ ಆಹಾರ ವಾದಂತಹ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಉದ್ಯಮಿಯೊಬ್ಬರ ಮನೆಯಲ್ಲಿ ಸಂಭವಿಸಿದೆ.
ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಮೈಲಾವರಂ ನಿವಾಸಿ, ಉದ್ಯಮಿ ಬಿಜ್ಲಿ ಜಾಮಲಯ್ಯ ಇತ್ತೀಚೆಗೆ ತಾನು ಸಂಗ್ರಹಿಸಿಟ್ಟ ಹಣವನ್ನು ತೆರೆದು ನೋಡಿದ ಉದ್ಯಮಿಗೆ ಆಘಾತವಾಗಿತ್ತು.ಅದಕ್ಕೆ ಕಾರಣ, ಪೆಟ್ಟಿಗೆ ಸುರಕ್ಷಿತವಾಗಿಲ್ಲದ ಪರಿಣಾಮ 500 ರೂ ಹಾಗೂ 200 ರೂಪಾಯಿ ನೋಟಿನ ಕಂತೆಗಳನ್ನು ಗೆದ್ದಲ ಹುಳ ತಿಂದು ಹಣವನ್ನು ಚೂರುಪಾರು ಮಾಡಿ ಹಾಕಿರುವುದ್ದವು. ಇದನ್ನು ಕಂಡು ಅವರು ಆಘಾತಕ್ಕೊಳಗಾಗಿದ್ದಾರೆ.ಜಾಮಲಯ್ಯ ಅವರು ಹಂದಿ ಮಾರಾಟ ವ್ಯಾಪಾರ ನಡೆಸುತ್ತಿದ್ದರು. ದಿನಂಪ್ರತಿ ವಹಿವಾಟಿನ ಹಣವನ್ನು ಅವರು ಬ್ಯಾಂಕ್ ನಲ್ಲಿ ಇಡುವ ಬದಲು ಟ್ರಂಕ್ ನಲ್ಲಿ ಕೂಡಿ ಇಡುತ್ತಿದ್ದರು.
ತಾನು ಮನೆ ಕಟ್ಟಬೇಕು ಎಂಬ ಕನಸಿನೊಂದಿಗೆ ಸುಮಾರು ಐದು ಲಕ್ಷ ರೂಪಾಯಿ ಹಣ ಟ್ರಂಕ್ ನಲ್ಲಿ ಇಟ್ಟಿದ್ದರಂತೆ ಗೆದ್ದಲು ತಿಂದ ನೋಟುಗಳನ್ನು ಏನು ಮಾಡುವುದು ಎಂದು ತಿಳಿಯದೆ, ಮಕ್ಕಳಿಗೆ ಹಂಚಿದರು. ತುಂಡಾದ ನೋಟುಗಳಲ್ಲಿ ಮಕ್ಕಳು ರಸ್ತೆಯ ಮೇಲೆ ಮಾಡುತ್ತಿದ್ದದ್ದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಪೊಲೀಸರು ವಿಚಾರಿಸುವ ವೇಳೆ ಜಾಮಲಯ್ಯ ಅವರ ವಿಷಯ ಬಹಿರಂಗವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.