ಉತ್ತಮ ಎಲೆಮರೆಯ ಕಾಯಿಯಂತಿರುವ ಶಿಕ್ಷಕರನ್ನು ಗುರುತಿಸಿ ಅವರಿರುವ ಶಾಲೆಗೆ ಹೋಗಿ ಸತ್ಕರಿಸುವ ವಿಶಿಷ್ಟ ಕಾರ್ಯಕ್ಕೆ ಮುಂದಾಗಿ ಗ್ರಾಮೀಣ ಶಿಕ್ಷಕರ ಸಂಘ ಬಿ ವಿ ಅಂಗಡಿ, ನವಲಗುಂದ ತಾಲ್ಲೂಕು ಘಟಕಕ್ಕೆ ಅಭಿನಂದನೆಗಳ ಸುರಿಮಳೆ…..

Suddi Sante Desk

ಧಾರವಾಡ –

ಹೌದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ತಾಲ್ಲೂಕು ಅದ್ಯಕ್ಷರಾದ ಎಸ್ ಸಿ ಹೊಳೆಯಣ್ಣವರ ನೇತ್ರತ್ವ ದಲ್ಲಿ ಶಿಕ್ಷಕ ದಿನಾಚರಣೆಯ ನಿಮಿತ್ಯ ತಾಲೂಕ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಸಮಾರಂಭ ನಡೆಯಿತು. ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕ ಘಟಕ ನವಲಗುಂದ ವತಿಯಿಂದ ಈ ಒಂದು ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಮಾರಗೊಪ್ಪದ ಶಿಕ್ಷಕಿಯರಾದ ಶ್ರೀಮತಿ ಆರ್. ಎಸ್. ಪಾತ್ರದ ಅವರು ನಲಿ-ಕಲಿ ತರಗತಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವರು

ನವಲಗುಂದ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ಶಿಕ್ಷಕಿ ಯರಾದ ಶ್ರೀಮತಿ ಎಚ್. ಎಚ್. ಬೈರಕದಾರ ಅವರು ಕೂಡ ನಲಿ-ಕಲಿ ತರಗತಿಯನ್ನು ತಮ್ಮದೇ ಆದ ವಿಶಿಷ್ಟ ಶೈಲಿಯ ಬೋಧನೆಯೊಂದಿಗೆ ಹಾಗೂ ಸ್ವತಃ ಅತ್ಯುತ್ತಮ ಕಲಾವಿದರಾಗಿರುವ ಅವರಿಗೆ ಎಚ್ ಪಿ ಎಸ್ ತಡಹಾಳ ಶಾಲೆಯ ಗುರುಮಾತೆಯರಾದ ಶ್ರೀಮತಿ ಜಯಶ್ರೀ. ವಿ. ಹೊಸಮಠ ಅವರು 5 ರಿಂದ 7 ನೇ ತರಗತಿಯವರೆಗಿನ ಗಣಿತ ಹಾಗೂ ವಿಜ್ಞಾನ ಬೋಧನೆಯಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ವನ್ನು ಸುಗಮ ಗೊಳಿಸುತ್ತಿರುವ ಪ್ರಯುಕ್ತ ಸನ್ಮಾನಿಸಿ ಗೌರವಿಸಿದರು

ಎಚ್ ಪಿ ಎಸ್ ಗೊಬ್ಬರಗುಂಪಿ ಶಾಲೆಯ ಸಹ ಶಿಕ್ಷಕರಾದ ಶ್ರೀಯುತ ಬಿ. ಎಸ್. ಹೊಕ್ರಾಣಿ ಅವರಿಗೆ ಏಳನೇ ತರಗತಿ ಯ ಗಣಿತ ಹಾಗೂ ವಿಜ್ಞಾನ ವಿಷಯ ಬೋಧಿಸುತ್ತಿರುವ ಕ್ರಿಯಾಶೀಲ ಶಿಕ್ಷಕರು ಅಲ್ಲದೆ ಮಾಸ್ಟರ್ ಟ್ರೆನರ್ ಆಗಿ ತಾಲೂಕಿನ ಶಿಕ್ಷಕರಿಗೆ ಹಾಗೂ ಜಿಲ್ಲೆಯ ಶಿಕ್ಷಕರುಗಳಿಗೆ ಉತ್ತಮವಾದ ಶೈಕ್ಷಣಿಕ ತರಬೇತಿಯನ್ನು ನೀಡುತ್ತಿದ್ದಾರೆ

ಎಚ್ ಪಿ ಎಸ್ ಕುಸುಗಲ್ ಶಾಲೆಯ ಸಹ ಶಿಕ್ಷಕಿಯರಾದ ಶ್ರೀಮತಿ ನಾಗರತ್ನ. ಬುರ್ಜೆ ಅವರು ಮಕ್ಕಳ ಉಜ್ವಲ ಭವಿಷ್ಯಕ್ಕೆ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಮಕ್ಕಳ ಮಟ್ಟಕ್ಕೆ ಇಳಿದು ಗುಣಮಟ್ಟದ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿದ್ದಾರೆ.ಅದೇ ಶಾಲೆಯ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ ಕ್ರೀಡಾಪಟು ಆದ ಶ್ರೀಮತಿ ಎಚ್.ಎಮ್.ನಾಯ್ಕರ ರವರಿಗೆ ತಾಲೂಕ ಉತ್ತಮ ಕ್ರೀಡಾಪಟು ಎಂದು ಗೌರವಿಸಿ ಸನ್ಮಾನಿಸಲಾಯಿತು

ಈ ಮೇಲಿನ ಎಲ್ಲಾ ಆದರ್ಶ ಶಿಕ್ಷಕ ಶಿಕ್ಷಕಿಯರನ್ನು ಅವರ ಶಾಲೆಗೆ ಹೋಗಿ ಗೌರವ ಸನ್ಮಾನ ಕಾರ್ಯ ಜರುಗಿಸಿ ಅವರ ಶೈಕ್ಷಣಿಕ ಬದುಕಿನಲ್ಲಿ ಇನ್ನಷ್ಟು ತಮ್ಮನ್ನು ತಾವು ತೊಡಗಿಸಿ ಕೊಂಡು ಅಭಿವೃದ್ಧಿಯತ್ತ ಗಮನಹರಿಸಲು ಪ್ರೋತ್ಸಾಹಿಸಿದ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಿಕ್ಷಕ ಸಂಘದ ಸಂಚಾಲಕರು ಎಸ್ ಎಂ ಬೆಂಚಿಕೇರಿ ಅಧ್ಯಕ್ಷರಾದ ಎಸ್ ಸಿ ಹೊಳೆಯಣ್ಣವರ ಉಪಾಧ್ಯಕ್ಷರಾದ ಬಿ ಕೆ ಹಾಲವರ ಹಾಗೂ ಎಸ್ ಬಿ ಭಜಂತ್ರಿ ಶ್ರೀಮತಿ ವಿ ಪಿ ದಂಡಿಗದಾಸರ ಶ್ರೀಮತಿ ಎಸ್ ಡಿ ಬಾಳೆಕುಂದ್ರಿ ವಾಯ್ ಎಫ್ ಕೆಂಪಣ್ಣವರ ನಿಕಟ ಪೂರ್ವ ಕ.ಸಾಪ ಅಧ್ಯಕ್ಷರಾದ ಎಂ ಬಿ ಪವಾಡ ಶೆಟ್ಟರ,ಬಿ ವ್ಹಿ ಅಂಗಡಿ ವಿವಿಧ ಶಾಲೆಗಳ ಪ್ರಧಾನ ಗುರುಗ ಳಾದ ಎಸ್.ಜಿ ಆರೇರ್ ,ಎಸ್.ಎಸ್.ಹಂಡಗಿ, ಡಿ.ಜಿ ಬಾರಕೇರ,ಎ.ಆರ್.ಮೆಣಸಿನಕಾಯಿ,ಸಿ.ಎಫ್.ತಳವಾರ ಶ್ರೀಮತಿ ಎಸ್.ಎ.ರಾಯದುರ್ಗ ಅವರು ಹಾಗೂ ಸಮಸ್ತ ಗುರುಬಳಗದವರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿ ಗೊಳಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.