ಬೆಂಗಳೂರು –
ಶುಕ್ರವಾರವಷ್ಟೇ ತೆರೆಕಂಡ “ಪೊಗರು’ ಚಿತ್ರಕ್ಕೆ ಮಾಸ್ ಆಡಿಯನ್ಸ್ ದೊಡ್ಡ ಮಟ್ಟದಲ್ಲಿ ಬರುತ್ತಿರುವ ಮೂಲಕ ಚಿತ್ರದ ನಿರ್ಮಾಪಕರು ಸಖತ್ ಖುಷಿ ಯಾಗಿದ್ದಾರೆ.

ಮೊದಲ ದಿನವೇ “ಪೊಗರು’ 10.05 ಕೋಟಿ ಕಲೆಕ್ಷನ್ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಗೆಲುವಿನ ಭರವಸೆ ನೀಡಿದೆ. ಎರಡನೇ ದಿನವಾದ ಶನಿವಾರವೂ ಬಹುತೇಕ ಚಿತ್ರಮಂದಿರಗಳಲ್ಲಿ “ಪೊಗರು’ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಚಿತ್ರದ ಕಲೆಕ್ಷನ್ ಬಗ್ಗೆ ಮಾತನಾಡುವ ನಿರ್ಮಾಪಕ ಬಿ.ಕೆ.ಗಂಗಾಧರ್.

“ಸಿನಿಮಾಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಮೊದಲ ದಿನ ಹತ್ತು ಕೋಟಿ ಐದು ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಇದು ಕೇವಲ ಕರ್ನಾಟಕವೊಂದರಲ್ಲಿ ಮಾತ್ರ.

ಇನ್ನು ತಮಿಳು, ತೆಲುಗಿನಲ್ಲೂ ಚಿತ್ರದ ಕಲೆಕ್ಷನ್ ಜೋರಾಗಿದೆ’ ಅಲ್ಲದೇ ಪ್ರೇಕ್ಷಕ ಪ್ರಭು ಕೂಡಾ ಚಿತ್ರಕ್ಕೆ ಫೀದಾ ಆಗಿದ್ದಾರೆ ಎಂದರು.