ಬೆಂಗಳೂರು –
ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಗಳ ಮೂಲಕ ವಧು-ವರಾನ್ವೇಷಣೆ ಮಾಡಿ ವಂಚನೆಗೊಳಗಾಗುವ ಹಲವು ಪ್ರಕರಣಗಳನ್ನು ನೋಡಿದ್ದೇವೆ. ಆದರೆ ಇದು ಆ ವಂಚನೆಯ ಮತ್ತೊಂದು ಮುಖವಾಗಿದೆ. ಹೌದು ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂಥದೊಂದು ಪ್ರಕರಣ ಬೆಳಕಿಗೆ ಬಂದಿದೆ.
ಆನ್ ಲೈನ್ ನಲ್ಲಿ ಹೆಣ್ಣು ಹುಡುಕುತ್ತಿದ್ದ ಯುವಕರನ್ನು ಮರುಳು ಮಾಡಿ ವಿಡಿಯೋ ಕಾಲ್ ನಲ್ಲಿ ಅವರನ್ನು ಬೆತ್ತಲು ಮಾಡಿ ಆ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಖತರ್ನಾಕ್ ಮಹಿಳೆಯೊಬ್ಬಳ ಕಹಾನಿ ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದೆ ಆಕೆಯಿಂದ ವಂಚನೆಗೊಳ ಗಾದ ಬೆಂಗಳೂರಿನ ಹುಳಿಮಾವು ನಿವಾಸಿ ಯೊಬ್ಬರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ನಿಮ್ಮ ಫಿಟ್ನೆಸ್ ನೋಡಬೇಕು ಎಂದು ಮರುಳು ಮಾಡಿ ಸಂತ್ರಸ್ತ ಯುವಕನ ಬಟ್ಟೆ ಬಿಚ್ಚಿಸಿದ್ದ ಯುವತಿ ಆ ಫೋಟೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು.
ಇದೀಗ ಪ್ರಕರಣ ಸಂಬಂಧ ಪಶ್ಚಿಮ ಬಂಗಾಲ ಮೂಲದ ಯುವತಿ ವಿರುದ್ಧ ಪೊಲೀಸರು ಪ್ರಕರಣ ದಾಲಿಸಿಕೊಂಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.