ದೇಶದಲ್ಲಿ ಅಷ್ಟೇ ಅಲ್ಲದೇ ವಿದೇಶಗಳಲ್ಲೂ ಸುದ್ದಿ ಸಂತೆಯ ವೀಕ್ಷಕರು – ಒಂದು ವರ್ಷದಲ್ಲಿ ರಾಜ್ಯ ದೇಶ ವಿದೇಶಗಳಲ್ಲಿ ವೀಕ್ಷಕರಿಂದ ದಾಖಲೆಯ ವೀಕ್ಷಣೆ

Suddi Sante Desk

ಬೆಂಗಳೂರು –

ಹೊಸ ಕನಸು ಹೊಸ ಭರವಸೆಯೊಂದಿಗೆ ಆರಂಭಗೊಂಡ ಸುದ್ದಿ ಸಂತೆ ಡಿಜಿಟಲ್ ಮೀಡಿಯಾಗೆ ಈಗ ಒಂದು ವರ್ಷದ ಸಂಭ್ರಮ.ಕಳೆದ ಒಂದು ವರ್ಷದ ಹಿಂದೆ ಡಿಜಿಟಲ್ ಮೀಡಿಯಾದಲ್ಲಿ ಏನಾದರೂ ಒಂದು ಹೊಸದೊಂದು ಅದರಲ್ಲೂ ವಿಶೇಷವಾಗಿ ಸ್ಥಳೀಯ ಜನರ ಧ್ವನಿಗೆ ನ್ಯಾಯ ಒದಗಿಸಬೇಕೆಂಬ ಉದ್ದೇಶದಿಂದ ಆರಂಭಗೊಂಡ ಈ ಒಂದು ಡಿಜಿಟಲ್ ನ್ಯೂಸ್ ಸಾಕಷ್ಟು ಪ್ರಮಾಣದಲ್ಲಿ ನೊಂದ ಜನರ ಪರವಾಗಿ ಜೊತೆಗೆ ಪ್ರತಿಯೊಂದು ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ಬೆಳಕನ್ನು ಈ ಒಂದು ಡಿಜಿಟಲ್ ಮೀಡಿಯಾ ಹಗಲಿರುಳು ಎನ್ನದೇ ಕೆಲಸವನ್ನು ತುಂಬಾ ವೇಗವಾಗಿ ಸುದ್ದಿಯನ್ನು ಸಾರ್ವಜನಿಕರ ಕೈಗೆ ತಲುಪಿಸಿ ಸಧ್ಯ ಜನರ ನಾಡಿ ಮಿಡಿತವಾಗಿ ಹೆಸರಾಗಿದೆ.

ಸಾಮಾನ್ಯವಾಗಿ ಯಾವುದೇ ಒಂದು ಡಿಜಿಟಲ್ ಮೀಡಿಯಾ ವನ್ನು ಆರಂಭ ಮಾಡೋದು ಕಷ್ಟವಲ್ಲ ಆದರೆ ಅದನ್ನು ವೀಕ್ಷಕರಿಗೆ ತಲುಪಿಸೊದು ವೀಕ್ಷಕರನ್ನು ಹೊಂದೊದು ಅದು ತುಂಬಾ ಕಠಿಣವಾದ ಮಾತು ಹೀಗಿರುವಾಗ ಆರಂಭ ಮಾಡಿದ ನಂತರ ವಿರೋಧಿಗಳ ಕೊಂಕ ಮಾತಿನ ಮಧ್ಯೆಯೂ ಕೂಡಾ ಸಧ್ಯ ನಿಮ್ಮ ಸುದ್ದಿ ಸಂತೆ ಡಿಜಿಟಲ್ ಮೀಡಿಯಾ ರಾಜ್ಯ ದೇಶ ವಿದೇಶಗಳಲ್ಲೂ ಅಪಾರ ಸಂಖ್ಯೆಯಲ್ಲಿ ವೀಕ್ಷಕರನ್ನು ಹೊಂದಿದ್ದು ಸಂಸ್ಥೆಯ ಮತ್ತು ಟೀಮ್ ನ ಕಾರ್ಯವೈಖರಿಯನ್ನು ತೊರಿಸುತ್ತದೆ.

ಅದರಲ್ಲೂ ಜಗತ್ತಿನ 25 ಕ್ಕೂ ಹೆಚ್ಚು ವೀಕ್ಷಕರನ್ನು ಹೊಂದಿದ್ದು ನಿಜಕ್ಕೂ ಕೂಡಾ ಸಂತೋಷದ ವಿಚಾರ ವಾಗಿದ್ದು ಇದಕ್ಕೆ ಅಂಕಿ ಸಂಖ್ಯೆಗಳೇ ದಾಖಲೆಯಾಗಿದ್ದು ಇನ್ನೂ ಪ್ರಮುಖವಾಗಿ ಅಲ್ಪ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸುದ್ದಿ ಸಂತೆಯನ್ನು ಬೆಳೆಸಿದ ವೀಕ್ಷಕ ಪ್ರಭುಗಳೇ ನಿಮಗೆ ಕೋಟಿ ಕೋಟಿ ನಮನಗಳು ತಪ್ಪಿದಲ್ಲಿ ತಿದ್ದಿ ಹೇಳಿ ಸಲಹೆ ಸೂಚನೆ ಕೊಡಿ ಸುದ್ದಿಗಳಿದ್ದರೇ ಮಾಹಿತಿ ನೀಡಿ ನೀವು ಕೊಟ್ಟ ಸಹಕಾರ ಪ್ರೀತಿ ವಿಶ್ವಾಸ ಯಾವಾ ಗಲೂ ಸುದ್ದಿ ಸಂತೆಯ ಟೀಮ್ ನೊಂದಿಗೆ ಹೀಗೆ ಇರಲಿ ಅದರಲ್ಲೂ ವಿಶೇಷವಾಗಿ ನಾಡಿನ ಸರ್ಕಾರಿ ನೌಕರರಿಗೂ ಶಿಕ್ಷಕ ಬಂಧುಗಳಿಗೂ ಸುದ್ದಿ ಸಂತೆ ತುಂಬಾ ಆಭಾರಿಯಾ ಗಿದೆ.

ಸಂಪಾದಕರು ಮತ್ತು ಸುದ್ದಿ ಸಂತೆ ಟೀಮ್

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.