ನಿರ್ಮಲಾ ಹೊಂಗಲ ಅವರೇ ಈ ಬಾರಿ ನಮ್ಮ ವಾರ್ಡ್ ಗೆ ಬಾಸ್ ಎನ್ನುತ್ತಿದ್ದಾರೆ 1 ನೇ ವಾರ್ಡ್ ಜನತೆ

Suddi Sante Desk

ಧಾರವಾಡ –

ಹೌದು ಧಾರವಾಡದ 1 ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಿರ್ಮಲಾ ಹೊಂಗಲ ಪರ ಗೆಲುವಿನ ಅಲೆ ಕಂಡು ಬರುತ್ತಿದೆ.ಹೌದು ಈ ಹಿಂದೆ ಪಕ್ಷದಲ್ಲಿದ್ದುಕೊಂಡು ಅಧಿಕಾರದಲ್ಲಿ ಇರದಿದ್ದರೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯ ಗಳನ್ನು ಮಾಡಿದ ಇವರಿಗೆ ವಾರ್ಡ್ ನಲ್ಲಿ ಮತದಾ ರರು ಉತ್ತಮವಾದ ಸ್ಪಂದನೆ ನೀಡಿದ್ದಾರೆ.

ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ಕೂಡಾ ಈ ಹಿಂದೆ ಕ್ಷೇತ್ರದಲ್ಲಿ ಪಕ್ಷದ ಶಾಸಕರಿಂದ ಅವರೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನವನ್ನು ತಗೆದು ಕೊಂಡು ಬಂದು ಅಭಿವೃದ್ದಿಯನ್ನು ಮಾಡಿರುವ ಇವರು ಈಗ ವಾರ್ಡ್ ನ ಜನತೆಯ ಸೇವೆಗೆ ಮುಂದಾಗಿದ್ದಾರೆ.

ಹೀಗಾಗಿ ಸಧ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಯನ್ನು ಮಾಡಿದ್ದಾರೆ.ಅಖಾಡಕ್ಕೆ ಇಳಿದಾಗಿನಿಂದ ಸಂತಸಗೊಂಡಿರುವ ವಾರ್ಡ್ ನ ಜನರು ಮತದಾ ರರು ಈಗ ನಿರ್ಮಲಾ ಹೊಂಗಲ ಪರ ಧ್ವನಿಯಾಗಿ ನಿಂತುಕೊಂಡಿದ್ದಾರೆ.

ನಾಮಪತ್ರ ಸಲ್ಲಿಸಿ ಪ್ರಚಾರ ಕೈಗೊಂಡ ಇವರಿಗೆ ಆರಂಭದಿಂದಲೂ ಗೆಲುವಿನ ಮಾತುಗಳನ್ನು ಹೇಳುತ್ತಿರುವ ಮತದಾರರು ಬದಲಾವಣೆ ಬಯಸಿದ್ದೇವೆ ಅದು ನಿಮ್ಮಿಂದಾಗಲಿ ಎನ್ನುತ್ತಿದ್ದಾರೆ. ಹೀಗಾಗಿ ವಾರ್ಡ್ ನಲ್ಲಿ ಸಧ್ಯ ಕಾಂಗ್ರೆಸ್ ಪರ ಅಲೆ ಜೋರಾಗಿ ಕೇಳಿ ಬರುತ್ತಿದ್ದು ಹೊಸ ಕನಸು ಹೊಸ ಅಭಿವೃದ್ದಿಯ ಯೋಜನೆಗಳೊಂದಿಗೆ ಸ್ಪರ್ಧೆ ಮಾಡಿರುವ ಇವರಿಗೆ ವಾರ್ಡ್ ನಲ್ಲಿ ಮತದಾರರು ಜೈ ಜೈ ಎನ್ನುತ್ತಿದ್ದು ಈ ಬಾರಿ ವಾರ್ಡ್ ನಲ್ಲಿ ನಿಮ್ಮದೇ ಗೆಲುವು ನಿವೇ ನಮಗೆ ಬಾಸ್ ಎನ್ನುತ್ತಾ ಗೆಲುವಿನ ಮಾತುಗಳನ್ನು ಹೇಳಿ ಆಶೀರ್ವಾದವನ್ನು ಮಾಡುತ್ತಿದ್ದಾರೆ.

ಹೀಗಾಗಿ ವಾರ್ಡ್ ನಲ್ಲಿ ನಿರ್ಮಲಾ ಹೊಂಗಲ ಯವರು ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ. ಬಿಡುವಿಲ್ಲದೇ ಅಬ್ಬರದ ಪ್ರಚಾರವನ್ನು ಮಾಡುತ್ತಿ ದ್ದಾರೆ.ಜನ ಸೇವೆಯೇ ಜನಾರ್ಧನ ಸೇವೆ ಎಂದು ಕೊಂಡಿರುವ ಇವರು ಮತದಾರರಲ್ಲಿ ಅಭಿವೃದ್ದಿಯ ಕೆಲಸ ಕಾರ್ಯಗಳೊಂದಿಗೆ ಬಿಡುವಿಲ್ಲದೇ ಮತ ಯಾಚನೆಯಲ್ಲಿ ತೊಡಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.