ಕಾರವಾರ –
6ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗೆ ಲವ್ ಲೇಟರ್ ಕೊಟ್ಟಿರುವ ಘಟನೆ ಕಾರವಾರ ದಲ್ಲಿ ಬೆಳಕಿಗೆ ಬಂದಿದೆ.ಹೌದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಆರನೇ ತರಗತಿ ವಿದ್ಯಾರ್ಥಿನಿಗೆ ಲವ್ ಲೆಟರ್ ಕೊಟ್ಟಿದ್ದಾನೆ ವಿದ್ಯಾರ್ಥಿಯೊಬ್ಬ.ಇನ್ನೂ ಈ ಒಂದು ವಿಚಾರ ತಿಳಿಯುತ್ತಿದ್ದಂತೆ ಇತ್ತ ಶಿಕ್ಷಕಿ ವಿದ್ಯಾರ್ಥಿಯನ್ನು ಶಿಕ್ಷಕಿ ಬಾಸುಂಡೆ ಬರುವಂತೆ ಥಳಿಸಿದ್ದಾರೆ.ಹೊನ್ನಾವರದ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಇನ್ನೂ ಹೀಗೆ ಮಾಡಿದ ವಿದ್ಯಾರ್ಥಿಗೆ ಬುದ್ದಿ ಹೇಳಿ ಬಾಸುಂಡೆ ಬರುವಂತೆ ಶಿಕ್ಷಕಿ ಬಡಿದಿದ್ದಾರೆ ಎಂದು ಆರೋಪವನ್ನು ಮಾಡಿದ ಪೋಷಕರು ಶಿಕ್ಷಕಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಪೋಷಕರು ಆಕ್ರೋಶ ವ್ಯಕ್ತಪಡಿಸಿದ ನಂತರ ಶಿಕ್ಷಕಿ ಕ್ಷಮೆಯಾಚಿಸಿದ್ದಾರೆ.ಹೊನ್ನಾವರದ ಸರ್ಕಾರಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಸಹಪಾಠಿಗೆ ಲವ್ ಲೆಟರ್ ನೀಡಿದ್ದರಿಂದ ಆಕ್ರೋಶಗೊಂಡ ಶಿಕ್ಷಕಿ ಥಳಿಸಿದ್ದರಿಂದ ಬಾಸುಂಡೆ ಬಂದಿದೆ.ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈಗಾಗಲೇ ಪ್ರಕರಣ ಇತ್ಯರ್ಥವಾಗಿದ್ದು ಸುಖಾಂತ್ಯ ಕಂಡಿದೆ