This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Sports News

ರಾಜ್ಯದ ಶಾಲಾ ವಿದ್ಯಾರ್ಥಿ ಗಳಿಗೆ ಬಿಗ್ ಶಾಕ್ – ಈ ವರ್ಷವೂ ಯೋಜನೆಯಿಂದ ವಂಚಿತಗೊಂಡ ವಿದ್ಯಾರ್ಥಿ ಗಳು…..

WhatsApp Group Join Now
Telegram Group Join Now

ಬೆಂಗಳೂರು 

ರಾಜ್ಯ ಸರ್ಕಾರವು 8 ನೇ ತರಗತಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ನೀಡಿದ್ದು ಕೊರೊನಾ ಹಿನ್ನೆಲೆಯಲ್ಲಿ ಅನುದಾನದ ಕೊರತೆಯಿಂದಾಗಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 8 ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷ ಬೈಸಿಕಲ್ ವಿತರಣೆಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ. ಅನುದಾನದ ಕೊರತೆ ಮತ್ತು ಬಜೆಟ್ ನಲ್ಲಿ ಹಣವನ್ನು ಮೀಸಲಿಡದ ಕಾರಣ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಉಚಿತ ಶೂ-ಸಾಕ್ಸ್ ಮತ್ತು ಬೈಸಿಕಲ್ ನ್ನು ವಿತರಿಸದಿರಲು ನಿರ್ಧರಿ ಸಲಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ತೊಂದರೆಗೀಡಾದ ಶಿಕ್ಷಣದ ಗುಣಮಟ್ಟ ವನ್ನು ಸುಧಾರಿಸಲು ಈ ವರ್ಷ ಇಲಾಖೆಯ ಕೇಂದ್ರೀಕರಣ ವಾಗಿದೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ ಗುಣಮಟ್ಟವನ್ನು ಸುಧಾರಿಸುವುದರ ಜೊತೆಗೆ ಬಜೆಟ್ ನಲ್ಲಿ ಯಾವುದೇ ಹಣವನ್ನು ಒದಗಿಸದ ಕಾರಣ ಉಚಿತ ಸೈಕಲ್ ಗಳು ಮತ್ತು ಶೂ-ಸಾಕ್ಸ್ ಗ ಗಳನ್ನು ವಿತರಿಸದಿರಲು ನಿರ್ಧರಿಸಲಾಗಿದೆ.

1 ರಿಂದ 10 ನೇ ತರಗತಿಯ 50 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಗಳನ್ನು ಒದಗಿಸಲು ಇಲಾಖೆ ಪ್ರತಿ ವರ್ಷ 140 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿತ್ತು.ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಅನುದಾನದ ಕೊರತೆಯಿಂದಾಗಿ ರಾಜ್ಯದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷವೂ ಸೈಕಲ್ ವಿತರಣೆ ಕೈ ಬಿಡು ವಂತೆ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ


Google News

 

 

WhatsApp Group Join Now
Telegram Group Join Now
Suddi Sante Desk