ಧಾರವಾಡದಲ್ಲಿ ತಪ್ಪಿತು ದೊಡ್ಡ ದುರಂತ – ರಸ್ತೆ ಪಕ್ಕದಲ್ಲಿ ತೆಗ್ಗಿಗೆ ಉರುಳಿ ಬಿದ್ದ ಸಾರಿಗೆ ಬಸ್….

Suddi Sante Desk

ಧಾರವಾಡ –

ಧಾರವಾಡದಲ್ಲಿ ದೊಡ್ಡದೊಂದು ಬಸ್ ದುರಂತ ವೊಂದು ತಪ್ಪಿದೆ.ಹೌದು ಧಾರವಾಡದಿಂದ ಮೊರಬ ಕಡೆಗೆ ಹೊರಟಿದ್ದ ಸಾರಿಗೆ ಬಸ್ ನ ಏಕ್ಸೇಲ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದೆ.

ರಸ್ತೆ ಪಕ್ಕದಲ್ಲಿ ಉರುಳಿ ಬಿದ್ದ ಸಾರಿಗೆ ಬಸ್ ನಿಂದಾಗಿ ಇದರಲ್ಲಿದ್ದ ಮೂವತ್ತಕ್ಕೂ ಹೆಚ್ಚು ಪ್ರಯಾಣಿಕರು ಯಾವುದೇ ತೊಂದರೆಯಿಲ್ಲದೇ ಪ್ರಾಣಾಪಾಯಾ ದಿಂದ ಪಾರಾಗಿದ್ದಾರೆ.ಧಾರವಾಡದ ವನಹಳ್ಳಿ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ.

ಧಾರವಾಡ ತಾಲ್ಲೂಕಿನ ವನಹಳ್ಳಿ ಗ್ರಾಮದಲ್ಲಿ ಈ ಒಂದು ಅಪಘಾತ ನಡೆದಿದ್ದು ಧಾರವಾಡದಿಂದ ಮೊರಬ ಗೆ ಬಸ್ ಹೊರಟಿತ್ತು ಬಸ್ ನ ಏಕ್ಸೈಲ್ ಕಟ್ ಆಗುತ್ತಿದ್ದಂತೆ ಇದನ್ನು ಅರಿತ ಚಾಲಕನು ತನ್ನ ಚಾಣಾಕ್ಷಣದಿಂದ ದೊಡ್ಡ ದುರಂತವನ್ನು ತಪ್ಪಿಸಿ ದ್ದಾನೆ.

ಬಸ್ ನಿಯಂತ್ರಣ ಮಾಡುತ್ತಲೇ ರಸ್ತೆ ಪಕ್ಕದಲ್ಲಿ ಉರುಳಿ ಬಿದ್ದಿದೆ ಸಾರಿಗೆ ಬಸ್ ಇನ್ನೂ ಬಸ್ ನಲ್ಲಿದ್ದ ಮೂವತ್ತಕ್ಕೂ ಹೆಚ್ಚು ಪ್ರಯಾಣಿಕರು ಪಾರಾಗಿದ್ದು ಬಸ್ ಉರುಳಿ ಬೀಳುತ್ತಿದ್ದಂತೆ ಎದ್ದೊ ಬಿದ್ದೊ ಏನ್ನುತ್ತಾ ಬಸ್ ನಿಂದ ಹೊರ ಬಂದಿದ್ದಾರೆ ಜನರು.

ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಬಸ್ ನಲ್ಲಿದ್ದವರ ರಕ್ಷಣೆಯನ್ನು ಮಾಡಲಾಗಿದೆ.ಬಸ್ ನಲ್ಲಿದ್ದವರಿಗೆ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಹೀಗಾಗಿ ತಪ್ಪಿದೆ ದೊಡ್ಡದಾದ ದುರಂತವೊಂದು ಇನ್ನೂ ಸುದ್ದಿ ತಿಳಿದ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.