ಧಾರವಾಡ –
ಬೈಕ್ ವೊಂದು ಅಪಘಾತಕ್ಕಿಡಾದ ಘಟನೆ ಧಾರವಾಡದ ಮನಸೂರ ರಸ್ತೆಯಲ್ಲಿ ನಡೆದಿದೆ. ಧಾರವಾಡ ಹೊರವಲಯದ ಮನಸೂರ ರಸ್ತೆಯಲ್ಲಿನ ಮನಗುಂಡಿ ಕ್ರಾಸ್ ಬಳಿ ಈ ಒಂದು ಅಪಘಾತವಾಗಿದೆ.

ಬೈಕ್ ಗೆ ಯಾವುದೇ ವಾಹನ ಡಿಕ್ಕಿ ಹೊಡೆದಿದೆ ಅಥವಾ ಸ್ಕೀಡ್ ಆಗಿ ಬಿದ್ದಿದ್ದಾರೊ ರಸ್ತೆ ಮಧ್ಯದಲ್ಲಿ ಬೈಕ್ ಸವಾರ ಬಿದ್ದಿದ್ದಾರೆ.

ಬೈಕ್ ಅಪಘಾತಕ್ಕಿಡಾಗಿದ್ದು ಬೈಕ್ ಮೇಲೆ ಹೊರಟಿದ್ದ ಸವಾರನೊಬ್ಬನು ಅರ್ಧ ಘಂಟೆಗೂ ಹೆಚ್ಚು ಸಮಯ ರಸ್ತೆಯಲ್ಲಿ ಬಿದ್ದು ಒದ್ದಾಡಿದ್ದು ಕಂಡು ಬಂದಿತು .
ಇನ್ನೂ ಹುಲಕೊಪ್ಪ ಗ್ರಾಮದ ಯುವಕನೇ ಅಪಘಾತದಲ್ಲಿ ತೀವ್ರ ಸ್ವರೂಪದ ಗಾಯಗೊಂಡವನಾಗಿದ್ದು ಸಾರ್ವಜನಿಕರೇ ಆಸ್ಪತ್ರೆಗೆ ಶಿಪ್ಟ್ ಮಾಡಿದ್ದಾರೆ. ಸಧ್ಯ ಗಾಯಗೊಂಡ ಯುವಕ SDM ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನೂ ಇತ್ತ ಅಪಘಾತದ ಕುರಿತು ಮಾಹಿತಿ ಇಲ್ಲದ ಧಾರವಾಡ ಗ್ರಾಮೀಣ ಪೊಲೀಸರು ಅಪಘಾತಕ್ಕಿಡಾದ ಬೈಕ್ ಸವಾರನ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ.