ಧಾರವಾಡ – ರಸ್ತೆಗೆ ಅಡ್ಡಲಾಗಿ ಬಂದ ಬೈಕ್ ತಪ್ಪಿಸಲು ಹೋಗಿ ಪಾದಚಾರಿಗೆ ಚಿಗರಿ ಬಸ್ ವೊಂದು ಡಿಕ್ಕಿಯಾಗಿದೆ. ಧಾರವಾಡದ NTTF ಬಳಿ ಈ ಒಂದು ರಸ್ತೆ ಅಪಘಾತ ನಡೆದಿದೆ. ರಸ್ತೆಯಲ್ಲಿ ಅಡ್ಡವಾಗಿ ಬಂದ ಟು ವ್ಹೀಲರ್ ವಾಹನ ತಪ್ಪಿಸಲು ಹೋಗಿ ಬಿ ಆರ್ ಟಿಎಸ್ ಚಿಗರಿ ಬಸ್ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಪಾದಾಚಾರಿ ಸೇರಿ ಇಬ್ಬರಿಗೆ ಗಂಭೀರವಾಗಿ ಗಾಯಗಳಾಗಿವೆ. ಎನ್ ಟಿ ಟಿ ಎಫ್ ಬಳಿಯ ಸಿಗ್ನಲ್ ಕ್ರಾಸ್ ಮಾಡಲು ಬೈಕ್ ಸವಾರನು ಮಾಳಮಡ್ಡಿಯಿಂದ ನೇರವಾಗಿ ಮುಖ್ಯ ರಸ್ತೆ ಪ್ರವೇಶ ಮಾಡಿದ್ದಾನೆ.

ಇದೇ ವೇಳೆ ಹುಬ್ಬಳ್ಳಿಯಿಂದ ಧಾರವಾಡದ ಕಡೆಗೆ ಚಿಗರಿ ಬಸ್ ಬರುತ್ತಿತ್ತು. ಆದರೆ ಬೈಕ್ ಸವಾರನ್ನು ಏಕಾಏಕಿ ರಸ್ತೆ ಕ್ರಾಸ ಮಾಡಲು ಹೋಗಿದ್ದಾನಂತೆ. ಹೀಗಾಗಿ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಿಆರ್ ಟಿ ಎಸ್ ಬಸ್ ಮಧ್ಯ ಭಾಗದಲ್ಲಿ ಇದ್ದ ಬ್ಯಾರಿಕೇಡ್‌ಗೆ ಡಿಕ್ಕಿ ಹೋಡೆದು ಪಕ್ಕದಲ್ಲಿ ಇದ್ದ ಪಾದಚಾರಿಗೆ ಚಿಗರಿ ಬಸ್ ಡಿಕ್ಕಿ ಹೋಡೆದಿದೆ.

ಇನ್ನೂ ತೀವ್ರವಾಗಿ ಗಾಯಗೊಂಡ ಇವರನ್ನು ಶಶಿ ಹಿರೇಮಠ ಮತ್ತು ಅವರ ಗೆಳೆಯರು SDM ಆಸ್ಪತ್ರೆಗೆ ದಾಖಲು ಮಾಡಿದರು.ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ನಿಧನರಾದರು. ಇನ್ನೂ ಅಪಘಾತ ದಲ್ಲಿ ಭದ್ರತಾ ಸಿಬ್ಬಂದಿ ಬಾಪು ಕ್ಷೀರಸಾಗರ ತೀವ್ರವಾಗಿ ಗಾಯಗೊಂಡಿದ್ದಾರೆ.ಸಧ್ಯ ಧಾರವಾಡ ಸಂಚಾರಿ ಪೊಲೀಸ್ ಠಾಣೆ ಯಲ್ಲಿ ಚಿಗರಿ ಬಸ್ ಚಾಲಕನ ಮೇಲೆ ದೂರು ದಾಖಲಾಗಿದೆ.