ಧಾರವಾಡ –
ಧಾರವಾಡದಲ್ಲಿ ಬೇಂದ್ರೆ ನಗರ ಸಾರಿಗೆ ಬಸ್ ಮರಕ್ಕೆ ಡಿಕ್ಕಿಯಾಗಿದೆ. ಹುಬ್ಬಳ್ಳಿಯಿಂದ ಬಂದ ಬಸ್ ನಗರದ ಅಂಜುಮನ್ ವೃತ್ತದಲ್ಲಿ ತಿರುವು ತಗೆದು ಕೊಳ್ಳುವಾಗ ಬ್ರೇಕ್ ವೈಫಲ್ಯದಿಂದಾಗಿ ಪುಟ್ ಪಾತ್ ಗ್ರಿಲ್ಲ್ಸ್ ಗೆ ಡಿಕ್ಕಿಯಾಗಿ ನಂತರ ಮರಕ್ಕೆ ಅಪ್ಪಳಿಸಿದೆ.

ನಗರದ ಅಂಜುಮನ್ ವೃತ್ತದಲ್ಲಿ ಈ ಒಂದು ಘಟನೆ ಬೆಳ್ಳಂ ಬೆಳಿಗ್ಗೆ ನಡೆದಿದೆ. ಬಸ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರಯಾಣಿಕರು ಇದ್ದರು. ಹುಬ್ಬಳ್ಳಿ ಯಿಂದ ಬಂದ ಈ ಒಂದು ಬಸ್ ತಿರುವು ತಗೆದು ಕೊಂಡು ನಿಲ್ಲುವಷ್ಟರಲ್ಲಿ ಬಸ್ ನ ಬ್ರೇಕ್ ವೈಫಲ್ಯ ವಾಗಿದ್ದು ಹೀಗಾಗಿ ನಿಯಂತ್ರಣ ಮಾಡಿದ ಚಾಲಕ ಕೊನೆಗೆ ಮರಕ್ಕೆ ಹೊಡೆದಿದೆ.

ಅದೃಷ್ಟವಶಾತ್ ಯಾವುದೇ ರೀತಿಯ ಅವಘಡ ಗಳು ಆಗಿಲ್ಲ ಇನ್ನೂ ಬಸ್ ನಲ್ಲಿದ್ದ ಪ್ರಯಾಣಿಕರು ಸೇಫ್ ಆಗಿ ಪಾರಾಗಿದ್ದಾರೆ. ಬಸ್ ನ ಮುಂದಿನ ಭಾಗ ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದೆ.

ಇನ್ನೂ ಅಪಘಾತಕ್ಕೆ ಬಸ್ ನ ಬ್ರೇಕ್ ವೈಫಲ್ಯ ಕಾರಣವಾಗಿದ್ದು ವಿಷಯ ತಿಳಿದ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಇನ್ನೂ ಜನದಟ್ಟಣೆಯ ಪ್ರದೇಶಗಳಲ್ಲಿ ಬೆಳ್ಳಂ ಬೆಳಿಗ್ಗೆ ದೊಡ್ಡ ಪ್ರಮಾಣದ ಅವಘಡವೊಂದು ನಗರದಲ್ಲಿ ತಪ್ಪಿದಂತಾಗಿದೆ